ಹಸ್ಸಿ ಆರ್ಭಟ, ಮುಂಬೈ ಗೆಲವಿನ ಕೇಕೆ
ಆರಂಭಿಕ ಆಟಗಾರರು ಹಾಕಿಕೊಟ್ಟ ಭದ್ರ ಅಡಿಪಾಯ ಹಾಗೂ ಬೌಲರ್‌ಗಳ...
ಮುಂಬೈ: ಆರಂಭಿಕ ಆಟಗಾರರು ಹಾಕಿಕೊಟ್ಟ ಭದ್ರ ಅಡಿಪಾಯ ಹಾಗೂ ಬೌಲರ್‌ಗಳ ಶಿಸ್ತುಬದ್ಧ ಪ್ರದರ್ಶನದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್
ವಿರುದ್ಧ ಮತ್ತೊಂದು ಜಯಭೇರಿ ಬಾರಿಸಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆಟಗಾರರು 15 ರನ್‌ಗಳಿಂದ ಡೆಲ್ಲಿ ಡೇರ್‌ಡೆವಿಲ್ಸ್ ತಂಡವನ್ನು ಪರಾಭವಗೊಳಿಸಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಮುಂಬೈ ಇಂಡಿಯನ್ಸ್ 19.3 ಓವರುಗಳಲ್ಲಿ 173 ರನ್‌ಗಳ ಪೈಪೋಟಿ ಮೊತ್ತ ಕಲೆಹಾಕಿತು.
ಆರಂಭಿಕ ಮೈಕ್ ಹಸ್ಸಿ (56ರನ್, 33 ಎಸೆತ, 7 ಬೌಂಡರಿ, 2 ಸಿಕ್ಸರ್) ಸ್ಫೋಟಕ ಅರ್ಧಶತಕ ಬಾರಿಸಿ
ಮುಂಬೈ ತಂಡ ಉತ್ತಮ ಮೊತ್ತ ಗಳಿಸಲು ನೆರವಾದರು. ಅವರು ಮೊದಲ ವಿಕೆಟ್‌ಗೆ (35ರನ್, 25 ಎಸೆತ) ಲೆಂಡ್ಲ್ ಸಿಮನ್ಸ್ ಜೊತೆಗೂಡಿ ಕೇವಲ 48 ಎಸೆತಗಳಲ್ಲಿ 87 ರನ್ ಸಂಗ್ರಹಿಸುವ ಮೂಲಕ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು.
ಮೂರನೇ ಕ್ರಮಾಂಕದಲ್ಲಿ ಬಂದ ನಾಯಕ ರೋಹಿತ್ ಶರ್ಮಾ (30ರನ್, 21 ಎಸೆತ, 4 ಬೌಂಡರಿ) ಕೂಡ ಉತ್ತಮ ಹೊಡೆತಗಳನ್ನು ಬಾರಿಸಿ ರಂಜಿಸಿದರು. ಒಂದು ಹಂತದಲ್ಲಿ ಮುಂಬೈ ತಂಡ 12 ಓವರುಗಳಲ್ಲಿ 2 ವಿಕೆಟ್‌ಗೆ 120 ರನ್‌ಗಳಿಸಿದಾಗ ಮೊತ್ತ ದ್ವಿಶತಕದ ಗಡಿ ದಾಟುವ ಸೂಚನೆ ಇತ್ತು. ಆದರೆ, ಹಸ್ಸಿ ನಿರ್ಗಮಿಸಿದ ನಂತರ ತಂಡ ನಾಟಕೀಯ ಕುಸಿತ ಕಾಣುವುದರೊಂದಿಗೆ ಆ ಆಸೆ ನೆರವೇರಲಿಲ್ಲ.
ಡೆಲ್ಲಿ ಪರ ಉತ್ತಮ ದಾಳಿ ನಡೆಸಿದ ಇಮ್ರಾನ್ ತಾಹಿರ್ 3 ಮತ್ತು ಜೈದೇವ್ ಉನದ್ಕತ್ 2 ವಿಕೆಟ್ ಉರುಳಿಸಿದರು.
ಬಳಿಕ 174 ರನ್‌ಗಳ ಕಠಿಣ ಗುರಿ ಬೆಂಬತ್ತಿದ ಡೆಲ್ಲಿ ಡೇರ್‌ಡೆವಿಲ್ಸ್ ತಂಡಕ್ಕೆ 20 ಓವರುಗಳಲ್ಲಿ 4 ವಿಕೆಟ್‌ಗೆ 158 ರನ್‌ಗಳಿಸಲಷ್ಟೇ ಸಾಧ್ಯವಾಯಿತು.
ಆರಂಭಿಕ ಕೆವಿನ್ ಪೀಟರ್ಸನ್ (44ರನ್, 31 ಎಸೆತ, 6 ಬೌಂಡರಿ, 1 ಸಿಕ್ಸರ್) ಮತ್ತು ಮಧ್ಯಮ ಕ್ರಮಾಂಕದಲ್ಲಿ ಮನೋಜ್ ತಿವಾರಿ (41ರನ್, 31 ಎಸೆತ, 5 ಬೌಂಡರಿ, 1 ಸಿಕ್ಸರ್) ಮತ್ತು ಜೀನ್-ಪಾಲ್ ಡುಮಿನಿ
(ಅಜೇಯ 45, 29 ಎಸೆತ, 4 ಸಿಕ್ಸರ್) ಉತ್ತಮ ಹೋರಾಟ ನಡೆಸಿದರೂ ಡೆಲ್ಲಿ ತಂಡಕ್ಕೆ ಗೆಲವು ತಂದುಕೊಡಲು ಸಾಧ್ಯವಾಗಲಿಲ್ಲ.
ಸ್ಕೋರ್ ವಿವರ
ಮುಂಬೈ ಇಂಡಿಯನ್ಸ್ 19.3 ಓವರುಗಳಲ್ಲಿ 173
ಸಿಮನ್ಸ್ ಸಿ ಪಾರ್ನೆಲ್ ಬಿ ತಾಹಿರ್ 35, ಮೈಕ್ ಹಸ್ಸಿ ರನೌಟ್ 56, ರೋಹಿತ್ ಶರ್ಮಾ ಬಿ ಉನದ್ಕತ್ 30, ಪೊಲಾರ್ಡ್ ಸಿ ಕಾರ್ತಿಕ್ ಬಿ ಉನದ್ಕತ್ 11, ರಾಯುಡು ಸಿ ವಿಜಯ್ ಬಿ ನದೀಂ 2, ತಾರೆ ಸಿ ಜಾಧವ್ ಬಿ ತಾಹಿರ್ 14, ಹರ್‌ಭಜನ್ ಸಿ ವಿಜಯ್ ಬಿ ಪಾರ್ನೆಲ್ 2, ಶ್ರೇಯಸ್ ಗೋಪಾಲ್ ರನೌಟ್ 11, ಲ್ಯಾಂಗೆ ಸಿ ಕಾರ್ತಿಕ್ ಬಿ ತಾಹಿರ್ 1, ಪ್ರಗ್ಯಾನ್ ಓಜಾ ರನೌಟ್ 2, ಬುಮ್ರಾ ಅಜೇಯ 0, ಇತರೆ (ಲೆಗ್‌ಬೈ-6, ವೈ-3) 9. ವಿಕೆಟ್ ಪತನ: 1-87, 2-120, 3-140, 4-141, 5-151, 6-157, 7-161, 8-168, 9-171, 10-173.
ಬೌಲಿಂಗ್ ವಿವರ: ಪಾರ್ನೆಲ್ 3.3-0-26-1, ಸಿದ್ಧಾರ್ಥ್ ಕೌಲ್ 2-0-21-0,ಉನದ್ಕತ್ 2-0-24-2, ನದೀಂ 4-0-28-1, ಡುಮಿನಿ 4-0-31-0,ತಾಹಿರ್ 4-0-37-3.
ಡೆಲ್ಲಿ ಡೇರ್‌ಡೆವಿಲ್ಸ್ 20 ಓವರುಗಳಲ್ಲಿ 4 ವಿಕೆಟ್‌ಗೆ 158
ಮುರಳಿ ವಿಜಯ್ ಸ್ಟಂಪ್ ತಾರೆ ಬಿ ಗೋಪಾಲ್ 8, ಪೀಟರ್ಸನ್ ಬಿ ಹರ್‌ಭಜನ್ 44, ದಿನೇಶ್ ಕಾರ್ತಿಕ್ ಬಿ ಲ್ಯಾಂಗೆ 7, ಮನೋಜ್ ತಿವಾರಿ ಸಿ ಹಸ್ಸಿ ಬಿ ಲ್ಯಾಂಗೆ 41, ಡುಮಿನಿ ಅಜೇಯ 45, ಕೇದಾರ್ ಜಾಧವ್ ಅಜೇಯ 7. ಇತರೆ (ಲೆಗ್‌ಬೈ-3, ವೈ-2, ನೋಬಾಲ್-1) 6.
ವಿಕೆಟ್ ಪತನ: 1-43, 2-59, 3-61, 4-146.
ಬೌಲಿಂಗ್ ವಿವರ: ಬುಮ್ರಾ 4-0-36-0, ಲ್ಯಾಂಗೆ 4-0-32-2, ಓಜಾ 4-0-33-0, ಶ್ರೇಯಸ್ ಗೋಪಾಲ್ 3-0-20-1, ಹರ್‌ಭಜನ್ 4-0-30-1, ಪೊಲಾರ್ಡ್ 1-0-4-0.