2ನೇ ಸ್ಥಾನಕ್ಕೆ ಕೆಕೆಆರ್
ಕೋಲ್ಕತಾ: ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಯೂಸುಫ್ ಪಠಾಣ್ (72) ಅಬ್ಬರಕ್ಕೆ ತತ್ತರಿಸಿದ ಸನ್ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ 7ನೇ ಆವೃತ್ತಿಯಿಂದ ಹೊರಬಿದ್ದಿದೆ.
ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡ 34 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಗೆಲವು ದಾಖಲಿಸಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.
ಟಾಸ್ ಗೆದ್ದ ಕೋಲ್ಕತಾ ನೈಟ್ರೈಡರ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇನ್ನು ಮೊದಲು ಬ್ಯಾಟಿಂಗ್ ಮಾಡಲಿಳಿದ ಸನ್ರೈಸರ್ಸ್ 20 ಓವರ್ಗಳಲ್ಲಿ 7 ವಿಕೆಟ್ಗೆ 160 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ 14.2 ಓವರ್ಗಳಲ್ಲಿ 6 ವಿಕೆಟ್ಗೆ 161 ರನ್ ದಾಖಲಿಸಿ ಗೆಲವಿನ ಕೇಕೆ ಹಾಕಿತು.
ಸನ್ರೈಸರ್ಸ್ ತಂಡದ ಪರ ಶಿಖರ್ ಧವನ್ (29 ರನ್, 31 ಎಸೆತ, 5 ಬೌಂಡರಿ), ಹಾಗೂ ಡಾರೆನ್ ಸಾಮಿ (29 ರನ್, 19 ಎಸೆತ, 1 ಬೌಂಡರಿ, 3 ಸಿಕ್ಸರ್) ಹೊರತು ಪಡಿಸಿ ಉಳಿದ ಯಾವುದೇ ಬ್ಯಾಟ್ಸ್ಮನ್ ಉತ್ತಮ ರನ್ ಗಳಿಸಲಿಲ್ಲ. ಇನ್ನು ಕೆಕೆಆರ್ ಪರ ಅಬ್ಬರಿಸಿದ ಯೂಸುಫ್ ಪಠಾಣ್ (72 ರನ್, 22 ಎಸೆತ, 5 ಬೌಂಡರಿ, 7 ಸಿಕ್ಸರ್) ತಮ್ಮ ಸ್ಫೋಟಕ ಬ್ಯಾಟಿಂಗ್ನಿಂದ ಪಂದ್ಯದ ಗತಿಯನ್ನು ಬದಲಾಯಿಸಿದರು. ಈ ಮೂಲಕ ಕೆಕೆಆರ್ ತಂಡ ಮಂಗಳವಾರ ಇದೇ ಅಂಗಣದಲ್ಲಿ ನಡೆಯಲಿರುವ ಕ್ವಾಲಿಫೈಯರ್ 1 ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲಿದೆ.
ಸ್ಕೋರ್ ವಿವರ
ಸನ್ರೈಸರ್ಸ್ ಹೈದರಾಬಾದ್ 20 ಓವರ್ಗಳಲ್ಲಿ 7 ವಿಕೆಟ್ಗೆ 160
ಡೇವಿಡ್ ಬಿ ಮಾರ್ಕೆಲ್ 4, ಧವನ್ ರನೌಟ್ (ಪಾಂಡೆ/ಉತ್ತಪ್ಪ) 29, ನಮನ್ ಸಿಮತ್ತು ಬಿ ಡಸ್ಕೆಟ್ 26, ವೇಣುಗೋಪಾಲ್ ರನೌಟ್ (ಪಾಂಡೆ/ಉತ್ತಪ್ಪ) 27, ಸಾಮಿ ಸಿ ಶಕೀಬ್ ಬಿ ವಿನಯ್ 29, ಅನಿರುದ್ಧ ಸ್ಟಂಪ್ ಉತ್ತಪ್ಪ ಬಿ ಶಕೀಬ್ 3, ಹೋಲ್ಡರ್ ರನೌಟ್ (ವಿನಯ್/ಉತ್ತಪ್ಪ) 16, ಕರಣ್ ಅಜೇಯ 5, ರಸೂಲ್ ಅಜೇಯ 0, ಇತರೆ (ಲೆಗ್ ಬೈ 13, ವೈಡ್ 8) ಒಟ್ಟು 21 ವಿಕೆಟ್ ಪತನ: 1-5, 2-69, 3-89, 4-121, 5-127., 6-155, 7-155
ಬೌಲಿಂಗ್ ವಿವರ: ಮಾರ್ಕೆಲ್ 4-1-32-1, ವಿನಯ್ 4-0-32-1, ನಾರಾಯಣ್ 4-0-19-0, ಯಾದವ್ 3-0-32-0, ಡಸ್ಕೆಟ್ 1-0-7-1, ಶಕೀಬ್ 4-1-25-1
ಕೋಲ್ಕತಾ ನೈಟ್ರೈಡರ್ಸ್ 14.2 ಓವರ್ಗಳಲ್ಲಿ 6 ವಿಕೆಟ್ಗೆ 161
ಉತ್ತಪ್ಪ ಸಿ ಹೊಲ್ಡರ್ ಬಿ ಕರಣ್ 41, ಗಂಭೀರ್ ಬಿ ಹೊಲ್ಡರ್ 28, ಮನೀಷ್ ಸಿ ಸ್ಟೇಯ್ನ್ ಬಿ ಕರಣ್ 2, ಪಠಾಣ್ ಸಿ ಧವನ್ ಬಿ ಕರಣ್ 72, ಡಸ್ಕೆಟ್ ರನೌಟ್ (ಸಾಮಿ/ಓಜಾ) 0, ಶಕೀಬ್ ಸಿ ಹೊಲ್ಡರ್ ಬಿ ಕರಣ್ 1, ಸೂರ್ಯ ಅಜೇಯ 12, ವಿನಯ್ ಅಜೇಯ 0, ಇತರೆ (ಲೆಗ್ ಬೈ 1, ವೈಡ್ 2, ನೊಬಾಲ್ 2) ಒಟ್ಟು 5 ವಿಕೆಟ್ ಪತನ: 1-43, 2-55, 3-77, 4-78, 5-116, 6-153
ಬೌಲಿಂಗ್ ವಿವರ: ಭುವನೇಶ್ವರ್ 2.2-0-22-0, ಸ್ಟೇಯ್ನ್ 4-0-43-0, ಹೊಲ್ಡರ್ 3-0-35-1, ಕರಣ್ 4-0-38-4, ರಸೂಲ್ 1-0-22-0