ಗೆದ್ದವರಿಗೆ 15 ಕೋಟಿ
ಮುಂಬೈ: ಈ ಬಾರಿಯ ಐಪಿಎಲ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ತಂಡ 15 ಕೋಟಿಯನ್ನು ಬಹುಮಾನ ಮೊತ್ತವಾಗಿ ಪಡೆಯಲಿದ್ದು, ರನ್ನರ್ ಅಪ್ ತಂಡ ರು. 10 ಕೋಟಿಯನ್ನು ಪಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಇನ್ನು ಪ್ಲೇ ಆಫ್ಗೆ ಪ್ರವೇಶಿಸಿ ಫೈನಲ್ಗೆ ಲಗ್ಗೆ ಹಾಕಲು ವಿಫಲವಾಗುವ ಎರಡು ತಂಡಗಳು ತಲಾ 7.5 ಕೋಟಿಯನ್ನು ಪಡೆಯಲಿದೆ. ಈ ಮೂಲಕ ಈ ಬಾರಿಯ ಐಪಿಎಲ್ನಲ್ಲಿ ಪ್ರಶಸ್ತಿ ಮೊತ್ತ ಒಟ್ಟು 40 ಕೋಟಿಯಾಗಿದೆ.