ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸನ್ 160 ರನ್

Mainashree
Updated On : 24 May 2014, 10:17 am

ಕೋಲ್ಕತಾ: ಕೋಲ್ಕತಾ ನೈಟ್‌ರೈಡರ್ಸ್ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ 7ನೇ ಆವೃತ್ತಿಯ ಶನಿವಾರದ ಪಂದ್ಯದಲ್ಲಿ 160 ರನ್ ಕಲೆ ಹಾಕಿದೆ.
ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತಾ ನೈಟ್‌ರೈಡರ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇನ್ನು ಮೊದಲು ಬ್ಯಾಟಿಂಗ್ ಮಾಡಲಿಳಿದ ಸನ್‌ರೈಸರ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 160 ರನ್ ದಾಖಲಿಸಿತು.
ಸನ್‌ರೈಸರ್ಸ್ ತಂಡದ ಪರ ಶಿಖರ್ ಧವನ್ (29 ರನ್, 31 ಎಸೆತ, 5 ಬೌಂಡರಿ), ನಮನ್ ಓಜಾ (26 ರನ್, 23 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ಡಾರೆನ್ ಸಾಮಿ (29 ರನ್, 19 ಎಸೆತ, 1 ಬೌಂಡರಿ, 3 ಸಿಕ್ಸರ್) ಹೊರತು ಪಡಿಸಿ ಉಳಿದ ಯಾವುದೇ ಬ್ಯಾಟ್ಸ್‌ಮನ್ ಉತ್ತಮ ರನ್ ಗಳಿಸಲಿಲ್ಲ.
ಇನ್ನು ಕೆಕೆಆರ್ ಪರ ಮಾರ್ನ್ ಮಾರ್ಕೆಲ್, ರಾನ್ ಟೆನ್‌ಡಸ್ಕೆಟ್, ವಿನಯ್ ಹಾಗೂ ಶಕೀಬ್ ತಲಾ 1 ವಿಕೆಟ್ ಪಡೆದರು.
ಸ್ಕೋರ್ ವಿವರ
ಸನ್‌ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 160
ಡೇವಿಡ್ ಬಿ ಮಾರ್ಕೆಲ್ 4, ಧವನ್ ರನೌಟ್ (ಪಾಂಡೆ/ಉತ್ತಪ್ಪ) 29, ನಮನ್ ಸಿಮತ್ತು ಬಿ ಡಸ್ಕೆಟ್ 26, ವೇಣುಗೋಪಾಲ್ ರನೌಟ್ (ಪಾಂಡೆ/ಉತ್ತಪ್ಪ) 27, ಸಾಮಿ ಸಿ ಶಕೀಬ್ ಬಿ ವಿನಯ್ 29, ಅನಿರುದ್ಧ ಸ್ಟಂಪ್ ಉತ್ತಪ್ಪ ಬಿ ಶಕೀಬ್ 3, ಹೋಲ್ಡರ್  ರನೌಟ್ (ವಿನಯ್/ಉತ್ತಪ್ಪ) 16, ಕರಣ್ ಅಜೇಯ 5, ರಸೂಲ್ ಅಜೇಯ 0, ಇತರೆ (ಲೆಗ್ ಬೈ 13, ವೈಡ್ 8) ಒಟ್ಟು 21    ವಿಕೆಟ್ ಪತನ: 1-5, 2-69, 3-89, 4-121, 5-127., 6-155, 7-155
ಬೌಲಿಂಗ್ ವಿವರ: ಮಾರ್ಕೆಲ್ 4-1-32-1, ವಿನಯ್ 4-0-32-1, ನಾರಾಯಣ್ 4-0-19-0, ಯಾದವ್ 3-0-32-0, ಡಸ್ಕೆಟ್ 1-0-7-1, ಶಕೀಬ್ 4-1-25-1

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement