ನಿಕೊಗೆ ಒಲಿದ ಮೊನಾಕೊ
ಮೊನಾಕೊ: ಪ್ರಸಕ್ತ ಸಾಲಿನ ಫಾರ್ಮುಲಾ ಒನ್ ರೇಸ್ನಲ್ಲಿ ಮತ್ತೊಮ್ಮೆ ಅತ್ಯುತ್ತಮ ಪ್ರದರ್ಶನ ನೀಡಿರುವ ಮರ್ಸಿಡೀಸ್ ತಂಡದ ಚಾಲಕರಾದ ನಿಕೊ ರೋಸ್ಬರ್ಗ್ ಹಾಗೂ ಲೂಯಿಸ್ ಹ್ಯಾಮಿಲ್ಟನ್ ಮೊನಾಕೊ ಎಫ್ ಒನ್ ರೇಸ್ನಲ್ಲಿ ಅಗ್ರ ಎರಡು ಸ್ಥಾನ ಪಡೆದಿದ್ದಾರೆ.
ಭಾನುವಾರ ನಡೆದ ರೇಸ್ನಲ್ಲಿ ನಿಕೊ ರೋಸ್ಬರ್ಗ್ ತಮ್ಮ ತಂಡದ ಸಹ ಚಾಲಕ ಲೂಯಿಸ್ ಹ್ಯಾಮಿಲ್ಟನ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದಾರೆ. ಕಳೆದ ನಾಲ್ಕು ರೇಸ್ಗಳಲ್ಲಿ ಅಗ್ರ ಸ್ಥಾನ ಪಡೆದಿದ್ದ ಹ್ಯಾಮಿಲ್ಟನ್ ಎರಡನೇ ಸ್ಥಾನ ಪಡೆದಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ರೆಡ್ಬುಲ್ನ ಡೇನಿಯಲ್ ರಿಕಾರ್ಡೊ ಹಾಗೂ ಅದೇ ತಂಡದ ಸೆಬಾಸ್ಟಿಯನ್ ವೆಟಲ್ 4ನೇ ಸ್ಥಾನ ಪಡೆದಿದ್ದಾರೆ.
ಇನ್ನು ಸಹರಾ ಫೋರ್ಸ್ ಇಂಡಿಯಾದ ಚಾಲಕರಾದ ಸೆರ್ಗಿಯೊ ಪೆರೆಜ್ 10ನೇ ಸ್ಥಾನ ಪಡೆದರೆ, ಸಹ ಚಾಲಕ ನಿಕೊ ಹಲ್ಕನ್ಬರ್ಗ್ 11ನೇ ಸ್ಥಾನ ಪಡೆದಿದ್ದಾರೆ.