ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮುಂಬೈಗೆ ಕಠಿಣ ಹಾದಿ

Mainashree
Updated On : 25 May 2014, 9:55 am

ಮುಂಬೈ: ಆರಂಭಿಕ ಸಂಜು ಸ್ಯಾಮ್ಸನ್ ಮತ್ತು ಕರುಣ್ ನಾಯರ್ ರನ್ ಮಳೆ ಸುರಿಸುವುದರೊಂದಿಗೆ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ ಟಿ20 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಲು 190 ರನ್‌ಗಳ ಕಠಿಣ ಸವಾಲು ನೀಡಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್‌ಗೆ ಇಳಿದ ರಾಜಸ್ಥಾನ ರಾಯಲ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 189 ರನ್‌ಗಳ ಉತ್ತಮ ಮೊತ್ತ ಪೇರಿಸಿತು.
ಸಂಜು ಸ್ಯಾಮ್ಸನ್ ಕೇವಲ 47 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 74 ರನ್ ಹಾಗೂ ಕರುಣ್ ನಾಯರ್ 27 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 50 ರನ್ ಸಿಡಿಸಿ ರಾಜಸ್ಥಾನ ರಾಯಲ್ಸ್‌ಗೆ ಉತ್ತಮ ಆಸರೆಯಾದರು. ಸ್ಯಾಮ್ಸನ್ ಜತೆ ಇನಿಂಗ್ಸ್ ಆರಂಭಿಸಿದ್ದ ನಾಯಕ ಶೇನ್ ವ್ಯಾಟ್ಸನ್ ಕೇವಲ 8 ರನ್ ಗಳಿಸಿ ವಿಕೆಟ್ ಕೈ ಚೆಲ್ಲಿದಾಗ ರಾಜಸ್ಥಾನದ ಮೊತ್ತ 5.3 ಓವರ್‌ಗಳಲ್ಲಿ 30 ರನ್ ಅಷ್ಟೆ ಆಗಿತ್ತು.
ನಂತರದಲ್ಲಿ ಸಂಜು ಮತ್ತು ಕರುಣ್ ಶುರುವಿನಲ್ಲಿ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿದ್ದರಿಂದ, ರಾಜಸ್ಥಾನದ ಮೊತ್ತ 10 ಓವರ್‌ಗಳಲ್ಲಿ ಬರಿ 59 ರನ್ ಆಗಿತ್ತು. ಆದರೆ ಉತ್ತಮ ಲಯಕ್ಕೆ ಮರಳುತ್ತಿದ್ದಂತೆ ಸಂಜು, ಕರುಣ್ ಎದುರಾಳಿ ಬೌಲರ್‌ಗಳನ್ನು ಚಚ್ಚಲು ಮುಂದಾದ ಪರಿಣಾಮ, ರನ್ ಮಳೆ ಆರಂಭವಾಯಿತು.
ಸ್ಕೋರ್ ವಿವರ
ರಾಜಸ್ಥಾನ ರಾಯಲ್ಸ್
20 ಓವರುಗಳಲ್ಲಿ 4 ವಿಕೆಟ್‌ಗೆ 189
ವ್ಯಾಟ್ಸನ್ ಸಿ ಪೊಲಾರ್ಡ್ ಬಿ ಹರ್ಭಜನ್ 8, ಸಂಜು ಸ್ಯಾಮ್ಸನ್ ಸಿ ಹರ್ಭಜನ್ ಬಿ ಗೋಪಾಲ್ 74, ಕರುಣ್ ನಾಯರ್ ಸಿ ಸಿಮನ್ಸ್ ಬಿ ಬುಮ್ರಾ 50, ಬ್ರಾಡ್ ಹಾಡ್ಜ್ ಅಜೇಯ 29, ಫಾಕ್ನರ್ ಸಿ ಆ್ಯಂಡರ್‌ಸನ್ ಬಿ ಪೊಲಾರ್ಡ್ 23, ಕೂಪರ್ ಅಜೇಯ 0 ಇತರೆ (ಲೆಗ್ ಬೈ 2, ವೈಡ್ 3) ಒಟ್ಟು 5
ವಿಕೆಟ್ ಪತನ: 1-34, 2-134, 3-136, 4-185
ಬೌಲಿಂಗ್ ವಿವರ: ಆ್ಯಂಡರ್‌ಸನ್ 2-0-14-0, ಬುಮ್ರಾ 4-1-30-1, ಪ್ರಗ್ಯಾನ್ ಓಜಾ 4-0-31-0, ಹರ್ಭಜನ್ 4-0-43-1, ಶ್ರೇಯಸ್ ಗೋಪಾಲ್ 3-0-36-1, ಪೊಲಾರ್ಡ್ 3-0-33-1

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement