ಸ್ವ್ಯಾಬ್ ಪದಾಧಿಕಾರಿಗಳ ಆಯ್ಕೆ
ಬೆಂಗಳೂರು: ಬೆಂಗಳೂರು ಕ್ರೀಡಾ ಬರಹಗಾರರ ಸಂಘಕ್ಕೆ (ಸ್ವ್ಯಾಬ್) ಭಾನುವಾರ ನಡೆದ ಚುನಾವಣೆಯಲ್ಲಿ ಎಲ್ಲಾ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾದರು. ಹೊಸ ಆಡಳಿತ ಮಂಡಳಿಯ ಅಧಿಕಾರವಧಿ ಎರಡು (2014ರಿಂದ 2016ರ ಜೂನ್ವರೆಗೆ) ವರ್ಷಗಳದ್ದಾಗಿರುತ್ತದೆ.
ಪದಾಧಿಕಾರಿಗಳ ಪಟ್ಟಿ: ಅಧ್ಯಕ್ಷ- ಕೆ.ಸಿ. ವಿಜಯ್ಕುಮಾರ್ (ದಿ ಹಿಂದು), ಉಪಾಧ್ಯಕ್ಷ- ಮನುಜಾ ವೀರಪ್ಪ (ಡೆಕ್ಕನ್ ಕ್ರೋನಿಕಲ್), ಕಾರ್ಯದರ್ಶಿ-ಡಿ.ವಿ. ಗರುಡ (ಎಸ್ಬಿಎಸ್ ರೇಡಿಯೊ-ಕನ್ನಡ), ಜಂಟಿ ಕಾರ್ಯದರ್ಶಿ- ಮೈಲಾರಲಿಂಗ ದಿಂಡಲಕೊಪ್ಪ (ಕನ್ನಡ ಪ್ರಭ), ಖಜಾಂಚಿ- ಮಧು ಜವಳಿ (ಡೆಕ್ಕನ್ ಹೆರಾಲ್ಡ್), ಕಾರ್ಯಕಾರಿ ಸಮಿತಿ- ಆರ್. ಸತ್ಯ (ದಿ ಟೈಮ್ಸ್ ಆಫ್ ಇಂಡಿಯಾ), ಓಂಕಾರ್ ಮೂರ್ತಿ (ಪ್ರಜಾವಾಣಿ), ಸಿಡ್ನಿ ಕಿರಣ್ (ಡೆಕ್ಕನ್ ಹೆರಾಲ್ಡ್), ರೋಷನ್ ತ್ಯಾಗರಾಜನ್ (ವಿಸ್ಡನ್ ಇಂಡಿಯಾ), ವಿಜೇತ್ಕುಮಾರ್ (ವಿಜಯ ಕರ್ನಾಟಕ), ಮ್ಯಾಕ್ಸಿನ್ ಮ್ಯಾಥ್ಯೂ (ದಿ ಟೈಮ್ಸ್ ಆಫ್ ಇಂಡಿಯಾ).