ಎಸಿಸಿ ಲೆಕ್ಕಕ್ಕೆ ಶ್ರೀನಿ ಒಪ್ಪಿಗೆ
ಚೆನ್ನೈ: ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿರುವ ಎನ್.ಶ್ರೀನಿವಾಸನ್ ಇಂದು ನಡೆದ ಏಷ್ಯನ್ ಕ್ರಿಕೆಟ್ ಸಮಿತಿಯ ಆರ್ಥಿಕ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದರು. ಅಲ್ಪಾವಧಿಯಲ್ಲಿ ನಡೆದ ಸಭೆಯಲ್ಲಿ ವಾರ್ಷಿಕ ಲೆಕ್ಕ ಪತ್ರಗಳಿಗೆ ಒಪ್ಪಿಗೆ ನೀಡಿದರು. ಆದರೆ ಎಸಿಸಿ 23 ವರ್ಷದೊಳಗಿನ ಉದಯೋನ್ಮುಖ ಪಂದ್ಯಾವಳಿ ಸೇರಿದಂತೆ ಉಳಿದ ಯಾವುದೇ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಗಲಿಲ್ಲ.
ಇಂದಿನ ಸಭೆಯಲ್ಲಿ ಕೇವಲ ಲೆಕ್ಕ ಪತ್ರಗಳಿಗೆ ಒಪ್ಪಿಗೆ ನೀಡಲಾಗಿದ್ದು, ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಸಲಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ತಿಳಿಸಿದ್ದಾರೆ.