ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವಿಶ್ವಕಪ್ ಹಾಕಿಯಿಂದ ನಿಕಿನ್ ತಿಮ್ಮಯ್ಯ ಔಟ್

Mainashree
Updated On : 27 May 2014, 9:51 am

ದಿ ಹೇಗ್ (ನೆದರ್‌ಲೆಂಡ್ಸ್): ವಿಶ್ವಕಪ್ ಹಾಕಿ ಪಂದ್ಯಾವಳಿ ಆರಂಭಕ್ಕೆ ಮುನ್ನವೇ ಭಾರತ ತಂಡಕ್ಕೆ ಮತ್ತೊಂದು ಆಘಾತ ಉಂಟಾಗಿದ್ದು, ಭರವಸೆಯ ಮುನ್ಪಡೆ ಆಟಗಾರ ನಿಕಿನ್ ತಿಮ್ಮಯ್ಯ ಗಾಯಕ್ಕೆ ತುತ್ತಾಗಿರುವ ಕಾರಣ ಟೂರ್ನಿಯಿಂದ ಹೊರಗುಳಿಯಬೇಕಾಗಿದೆ.
ನಿಕಿನ್ ಸ್ಥಾನದಲ್ಲಿ ಮತ್ತೊಬ್ಬ ಆನುಭವಿ ಆಟಗಾರ ಯುವರಾಜ್ ವಾಲ್ಮೀಕಿ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ಮೂಲದ ಆಟಗಾರ ನಿಕಿನ್ ತಿಮ್ಮಯ್ಯ ಬಲಗಾಲಿನ ಸ್ನಾಯುಸೆಳೆತಕ್ಕೆ ಒಳಗಾಗಿದ್ದು, ಅವರಿಗೆ ನಾಲ್ಕು ವಾರಗಳ ಕಾಲ ಸಂಪೂರ್ಣ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಅಭ್ಯಾಸದ ವೇಳೆ ಗಾಯಗೊಂಡಿದ್ದ ಮುನ್ನಡೆ ಆಟಗಾರ ರಮಣ್‌ದೀಪ್ ಸಿಂಗ್ ಟೂರ್ನಿಯಿಂದ ಹೊರಗುಳಿಯುವಂತಾಗಿತ್ತು. ಅವರ ಸ್ಥಾನಕ್ಕೆ ಲಲಿತ್ ಉಪಾಧ್ಯಾಯ್ ಅವರನ್ನು ಸೇರಿಸಿಕೊಳ್ಳಲಾಗಿತ್ತು. ವಿಶ್ವಕಪ್ ಹಾಕಿ ಟೂರ್ನಿ ಮೇ 31ರಿಂದ ಜೂನ್ 15ರ ವರೆಗೆ ನಡೆಯಲಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement