ಸಚಿನ್ ತಂಡಕ್ಕೆ 'ಕೇರಳ ಬ್ಲಾಸ್ಟರ್ಸ್' ಹೆಸರು ನಾಮಕರಣ
ತಿರುವನಂತಪುರಂ: ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್)ನಲ್ಲಿ ಸಚಿನ್ ತೆಂಡೂಲ್ಕರ್ ಅವರು ಕೊಚ್ಚಿ ಫ್ರಾಂಚೈಸಿಯಲ್ಲಿ ಪಾಲುದಾರರಾಗಿದ್ದು, ಈ ತಂಡಕ್ಕೆ 'ಕೇರಳ ಬ್ಲಾಸ್ಟರ್ಸ್' ಎಂದು ಹೆಸರಿಡಲಾಗಿದೆ.
ಮಂಗಳವಾರ ನಡೆದ ಸಮಾರಂಭದಲ್ಲಿ ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಸಚಿನ್ ತೆಂಡೂಲ್ಕರ್ ಅವರೊಂದಿಗೆ ಸಭೆಯ ಬಳಿಕ ಈ ಹೆಸರನ್ನು ಪ್ರಕಟಿಸಿದರು.
ಇದೇವೇಳೆ ಮುಂದಿನ ವರ್ಷ ಕೇರಳದಲ್ಲಿ ನಡೆಯಲಿರುವ ಗುಡ್ವಿಲ್ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಅಧಿಕೃತ ರಾಯಭಾರಿಯಾಗುವಂತೆ ಉಮ್ಮನ್ ಅವರ ಕೋರಿಕೆಗೆ ಸಚಿನ್ ಒಪ್ಪಿಕೊಂಡಿದ್ದಾರೆ.