ಶ್ರೀಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಕಟಕ(ಒಡಿಶಾ): ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಭರ್ಜರಿ ಜಯ ಗಳಿಸಿದೆ.
ಒಡಿಶಾದ ಕಟಕ್‌ನ ಬರಬಾಟಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಪರ ಅಂಜಿಕ್ಯಾ ರಹಾನೆ ಮತ್ತು ಶಿಖರ್ ಧವನ್‌ರ ಶತಕ. ಭಾರತ 350 ಗಡಿ ದಾಟಲು ಸಹಾಯಕವಾಯಿತು. ಇದರೊಂದಿಗೆ ಭಾರತ ಶ್ರೀಲಂಕಾಗೆ ಗೆಲ್ಲಲು 364 ರನ್‌ಗಳ ಗುರಿ ನೀಡಿತ್ತು. ಬೃಹತ್ ಮೊತ್ತ ಬೆನ್ನತ್ತಿದ ಶ್ರೀಲಂಕಾ 194 ರನ್ಗಳಿಗೆ ಆಲ್ ಔಟ್ ಆಯಿತು. ಇದರೊಂದಿಗೆ ಭಾರತ 169 ರನ್ಗಳಿಂದ ಜಯ ಗಳಿಸಿದೆ.
ಲಂಕಾ ಪರ ಮಹೇಲ ಜಯವರ್ದೇನೆ ಮಾತ್ರ 43 ರನ್ ಗಳಿಸಿದರೆ ಇನ್ಯಾರು 30ರ ಗಡಿ ದಾಟಲಿಲ್ಲ.
ಭಾರತ ಪರ ಇಶಾಂತ್ ಶರ್ಮ 4 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಮತ್ತು ಉಮೇಶ್ ಯಾದವ್ ತಲಾ 2 ವಿಕೆಟ್ ಪಡೆದರು.
ಅಂಜಿಕ್ಯಾ ರಹಾನೆ 111 ರನ್ ಗಳಿಸಿ ಔಟಾದರೆ, ಶಿಖರ್ ಧವನ್ 113 ರನ್ ದಾಖಲಿಸಿದರು. ನಂತರ ಬಂದ ಬಿರುಸಿನ ಆಟಗಾರ ಸುರೇಶ್ ರೈನಾ ಕೇವಲ 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಭಾರತ ತಂಡ ನಾಯಕ ವಿರಾಟ್ ಕೊಹ್ಲಿ 22 ರನ್ ಗಳಿಸಿ ಔಟಾದರು. ಬಳಿಕ ಬಂದ ಅಂಬಟ್ಟಿ ರಾಯುಡು 27 ರನ್ ಗಳಿಸಿ ನಿರ್ಗಮಿಸಿದರು.
ಶ್ರೀಲಂಕಾ ಪರ ರಣದೀವ್ 3 ವಿಕೆಟ್ ಗಳಿಸಿದರೆ ಗಾಮ ಹಾಗೂ ಪ್ರಿಯಾಂಜನ್ ತಲಾ 1 ವಿಕೆಟ್ ಪಡೆದರು.