ಲಂಕಾ-ಭಾರತ ಏಕದಿನ ಪಂದ್ಯ: ಶತಕ ಸಿಡಿಸಿದ ರಹಾನೆ, ಧವನ್
ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಪರ ಅಂಜಿಕ್ಯಾ ರಹಾನೆ...
ಕಟಕ(ಒಡಿಶಾ): ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಪರ ಅಂಜಿಕ್ಯಾ ರಹಾನೆ ಮತ್ತು ಶಿಖರ್ ಧವನ್ ಶತಕ ಸಿಡಿಸಿದ್ದಾರೆ.
ಒಡಿಶಾದ ಕಟಕ್‌ನ ಬರಬಾಟಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿದೆ. ಆರಂಭಿಕ ಆಟಗಾರರಾದ ರಹಾನೆ ಅಜೇಯ 111 ಗಳ ನೇರವಿನೊಂದಿಗೆ ಭಾರತ 37 ಓವರ್‌ಗಳ ಲ್ಲಿ 240 ರನ್ ಗಳಿಸಿದೆ.
ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರಾಗಿ ಕಣಕ್ಕೀಳಿದ ರಹಾನೆ ಹಾಗೂ ಧವನ್ ಶ್ರೀಲಂಕಾ ಬೌಲರ್‌ಗಳ ಬೆವರಿಳಿಸಿದರು. ಹೆಚ್ಚು ಲಂಕಾ ಬೌಲರ್‌ಗಳನ್ನು ಕಾಡಿದ ಧವನ್ 113 ರನ್ ಗಳಿಸಿದ್ದಾಗ ಪ್ರಿಯಾಂಜನ್ ಎಸೆದ ಚೆಂಡನ್ನು ಬೌಂಡರಿಗಟ್ಟುವ ಭರದಲ್ಲಿ ಬೌಲ್ಡಾದರು. ಸದ್ಯ ರಹಾನೆ ಹಾಗೂ ಸುರೇಶ್ ರೈನಾ ಕಣದಲ್ಲಿದ್ದಾರೆ.