ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ದ್ರಾವಿಡ್ ನಾಯಕ ಸ್ಥಾನದಿಂದ ಇಳಿಸಲು ಸಂಚು ಮಾಡಿದ್ದ ಚಾಪೆಲ್: ಸಚಿನ್

ಭಾರತದ ಮಾಜಿ ಕೋಚ್ ಗ್ರೆಗ್ ಚಾಪೆಲ್ ಅವರು ವೆಸ್ಟ್ ಇಂಡೀಸ್ ನಲ್ಲಿ ನಡೆದ ೨೦೦೭ರ ವಿಶ್ವ ಕಪ್ ಗೂ ಮುಂಚೆ ರಾಹುಲ್ ದ್ರಾವಿಡ್ ಅವರಿಂದ...

Updated On : 3 Nov 2014, 6:43 am

ನವದೆಹಲಿ: ಭಾರತದ ಮಾಜಿ ಕೋಚ್ ಗ್ರೆಗ್ ಚಾಪೆಲ್ ಅವರು ವೆಸ್ಟ್ ಇಂಡೀಸ್ ನಲ್ಲಿ ನಡೆದ ೨೦೦೭ರ ವಿಶ್ವ ಕಪ್ ಗೂ ಮುಂಚೆ ರಾಹುಲ್ ದ್ರಾವಿಡ್ ಅವರಿಂದ ನಾಯಕ ಸ್ಥಾನವನ್ನು ಕಿತ್ತುಕೊಳ್ಳುವಂತೆ ಆಘಾತಕಾರಿ ಸಲಹೆ ನೀಡಿದ್ದರು ಎಂದು ಹೇಳಿ ಸಚಿನ್ ತೆಂಡುಲ್ಕರ್  ಹೊಸ ಬಾಂಬ್ ಎಸೆದಿದ್ದಾರೆ.

"ಇಬ್ಬರೂ ಒಟ್ಟಿಗೆ ಹಲವು ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ಆಳಬಹುದು" ಎಂದು ತಮ್ಮ ಮನೆಗೆ ಬಂದಿದ್ದಾಗ ಈ ಆಸ್ಟ್ರೇಲಿಯನ್ ಕೋಚ್ ಹೇಳಿದ್ದರು ಮತ್ತು ದ್ರಾವಿಡ್ ಅವರಿಂದ ನಾಯಕತ್ವವನ್ನು ಕಸಿದುಕೊಳ್ಳಲು ಸಹಾಯ ಮಾಡಲು ಮುಂದಾಗಿದ್ದರು ಎಂದು ತಾವು ಬರೆದಿರುವ, ಗುರುವಾರ ಬಿಡುಗಡೆಯಾಗಲಿರುವ ತಮ್ಮ ಆತ್ಮಕತೆ "ಪ್ಲೇಯಿಂಗ್ ಇನ್ ಮೈ ವೇ" ನಲ್ಲಿ ತಿಳಿಸಿದ್ದಾರೆ.

೨೦೦೫ ರಿಂದ ೨೦೦೭ ರವರೆಗೆ ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಿದ್ದ ಚಾಪೆಲ್ ಅವರ ಮೇಲೆ ತಮ್ಮ ತೀಕ್ಷ್ಣ ಟೀಕೆ ಮುಂದುವರೆಸಿ "ಅವರು ರಿಂಗ್ ಮಾಸ್ಟರ್ ನಂತೆ ತಮ್ಮ ಐಡಿಯಾಗಳನ್ನು ಎಲ್ಲರ ಮೇಲೆ ಹೇರುತ್ತಿದ್ದರು. ಅವುಗಳು ಆಟಗಾರರಿಗೆ ಹಿತಕರವಾಗಿದ್ದವೋ ಇಲ್ಲವೋ ಎಂಬುದನ್ನೂ ಚಿಂತಿಸುತ್ತಿರಲಿಲ್ಲ" ಎಂದು ಬರೆದಿದ್ದಾರೆ.

"ಇಬ್ಬರೂ ಒಟ್ಟಿಗೆ ಹಲವು ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ಆಳಬಹುದು" ಎಂಬ ಮಾತನ್ನು ಕೇಳಿ ನನ್ನ ಪಕ್ಕದಲ್ಲೇ ಇದ್ದ ಅಂಜಲಿ (ತೆಂಡುಲ್ಕರ್ ಅವರ ಪತ್ನಿ) ಕೂಡ ಶಾಕ್ ಆಗಿದ್ದರು ಎನ್ನುತ್ತಾರೆ.

"ಕ್ರಿಕೆಟ್ ನ ಬಹು ದೊಡ್ಡ ಸರಣಿ ಅನತಿ ದೂರದಲ್ಲಿದ್ದಾಗ, ನಾಯಕನ ಮೇಲೆ ಕಿಂಚಿತ್ತೂ ಗೌರವವಿಲ್ಲದೆ ಮಾತನಾಡಿದ ರೀತಿ ನನಗೆ ಆಶ್ಚರ್ಯ ತರಿಸಿತ್ತು" ಎಂದು ತೆಂಡೂಲ್ಕರ್ ಬರೆದಿದ್ದಾರೆ.

ಚಾಪೆಲ್ ಅವರ ಸಲಹೆಯನ್ನು ತಕ್ಷಣವೆ ತಿರಸ್ಕರಿಸಿದ್ದೆ ಎಂದು ಹೇಳುವ ಸಚಿನ್ "ಅವರು ನನ್ನನ್ನು ಒಪ್ಪಿಸಲು ೨ ಘಂಟೆ ಪ್ರಯತ್ನಿಸಿ ನಂತರ ತೆರಳಿದರು" ಎಂದು ಬರೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement