ಚಾಪೆಲ್ ಅವರನ್ನು ದೂಷಿಸುವ ಸರದಿಯಲ್ಲಿ ಈಗ ಹರಭಜನ್, ಲಕ್ಷ್ಮಣ್, ಜಹೀರ್
ಭಾರತದ ಮಾಜಿ ಕೋಚ್ ಗ್ರೆಗ್ ಚಾಪೆಲ್ ಅವನ್ನು ರಿಂಗ್ ಮಾಸ್ಟರ್ ಎಂದು ಕರೆದು ರಾಹುಲ್ ದ್ರಾವಿಡ್ ಅವರಿಂದ ನಾಯಕತ್ವ...
ನವದೆಹಲಿ: ಭಾರತದ ಮಾಜಿ ಕೋಚ್ ಗ್ರೆಗ್ ಚಾಪೆಲ್ ಅವನ್ನು ರಿಂಗ್ ಮಾಸ್ಟರ್ ಎಂದು ಕರೆದು ರಾಹುಲ್ ದ್ರಾವಿಡ್ ಅವರಿಂದ ನಾಯಕತ್ವ ಕಿತ್ತುಕೊಳ್ಳುವಂತೆ ಸೂಚಿಸಿದ್ದರು ಎಂದು ಬಿಡುಗಡೆಯಾಗಲಿರುವ ತಮ್ಮ ಆತ್ಮಕತೆ "ಪ್ಲೇಯಿಂಗ್ ಇಟ್ ಮೈ ವೆ" ನಲ್ಲಿ ಬರೆದುಕೊಂಡಿರ ಸಚಿನ್ ಮತ್ತು ಅದು ಸತ್ಯಕ್ಕೆ ದೂರ ಎಂದ ಚಾಪೆಲ್ ಪ್ರತಿಕ್ರಿಯಿಸಿದ ಹಿನ್ನಲೆಯಲ್ಲೇ, ಭಾರತ ಕ್ರಿಕೆಟ್ ಲೋಕದ ಇನ್ನಿತರ ಸದಸ್ಯರು ಚಾಪೆಲ್ ಮೇಲೆ ಹರಿಹಾಯ್ದಿದ್ದಾರೆ.
ಸಚಿನ್ ಅವರ ವಾದವನ್ನು ಅನುಮೋದಿಸಿರುವ ಜಹೀರ್ ಖಾನ್ ಅಮತ್ತು ಹರಭಜನ್ ಸಿಂಗ್ ಅವರು, ಚಾಪೆಲ್ ಅವರು ಸರ್ವಾಧಿಕಾರಿಂತೆ ನಡೆದುಕೊಳ್ಳುತ್ತಿದರು ಎಂದಿದ್ದಾರೆ. "ಒಮ್ಮೆ ಚಾಪೆಲ್ ನನ್ನ ಬಳಿ ಬಂದು ನಾನು ಕೋಚ್ ಆಗಿರುವವರೆಗೂ ನೀನು ಭಾರತ ತಂಡದಲ್ಲಿ ಆಡಲು ಸಾಧ್ಯವಿಲ್ಲ" ಎಂದಿದ್ದರು ಎಂದು ಜಹೀರ್ ಖಾನ್ ದೂರಿದ್ದಾರೆ. ನನ್ನ ವೃತ್ತಿ ಜೀವನವನ್ನೇ ಹಾಳು ಮಾಡಲು ಚಾಪೆಲ್ ಪ್ರಯತ್ನ ಪಟ್ಟರು ಎಂದು ಕೂಡ ಈ ವೇಗದ ಬೌಲರ್ ದೂರಿದ್ದಾರೆ.
"ಚಾಪೆಲ್ ಅವರು ಇಡೀ ಭಾರತ ಕ್ರಿಕಟ್ ತಂಡವನ್ನು ಹಾಳುಮಾಡಿದರು, ಅದನ್ನು ಸರಿಪಡಿಸಲು ಕನಿಷ್ಠ ೩ ವರ್ಷ ಹಿಡಿಯಿತು" ಎಂದು ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಚಾಪೆಲ್ ವಿರುದ್ಧ ಹರಿಹಾಯ್ದಿದ್ದಾರೆ.
"೩೨ ವರ್ಷದ ವಯಸ್ಸಿನಲ್ಲಿ ತಂಡಕ್ಕೆ ವಾಪಸ್ ಬರುವುದು ಕಷ್ಟ" ಎಂದು ಚಾಪೆಲ್ ನನಗೆ ಹೇಳಿದಾಗ ಆಘಾತವಾಯಿತು ಎನ್ನುತ್ತಾರೆ ಹೈದರಾಬಾದಿನ ಬ್ಯಾಟ್ಸ್ಮನ್ ವಿವಿಎಸ್ ಲಕ್ಷ್ಮಣ್.
ಮುಂಬೈ ನ ಒಂದು ಖಾಸಗಿ ಕಾರ್ಯಕ್ರಮದಲ್ಲಿ ಸಚಿನ್ ಅವರ ಈ ವಿವಾದಾತ್ಮಕ ಹೇಳಿಕೆಯ ಬಗ್ಗೆ ರಾಹುಲ್ ದ್ರಾವಿಡ್ ಅವರನ್ನು ಪ್ರಶ್ನಿಸಿದಾಗ, ಸಚಿನ್ ಮತ್ತು ಚಾಪೆಲ್ ಅವರ ಖಾಸಗಿ ಮಾತುಕತೆಯ ಬಗ್ಗೆ ನಾನು ಪ್ರತಿಕ್ರಿಯಿಸಲಾರೆ. ಪುಸ್ತಕವನ್ನು ಇಡಿಯಾಗಿ ಓದಿ ಅಗತ್ಯ ಬಿದ್ದಲ್ಲಿ ಸ್ಪಷ್ಟೀಕರಣ ನೀಡುತ್ತೇನೆ ಎಂದಿದ್ದಾರೆ.