ಕನ್ನಡಿಗ ಸ್ಟುವರ್ಟ್ ಬಿನ್ನಿಗೆ ಶ್ರೀಲಂಕಾ ಸರಣಿಗೆ ಅವಕಾಶ
ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೈಕ್ರೋ ಮ್ಯಾಕ್ಸ್ ಸರಣಿಯ ಎರಡನೆ ಮತ್ತು ಮೂರನೆ ಒಂದು ದಿನದ ಕ್ರಿಕೆಟ್ ಪಂದ್ಯಗಳಲ್ಲಿ ಆಡಲು ...
ನವದೆಹಲಿ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೈಕ್ರೋ ಮ್ಯಾಕ್ಸ್ ಸರಣಿಯ ಎರಡನೆ ಮತ್ತು ಮೂರನೆ ಒಂದು ದಿನದ ಕ್ರಿಕೆಟ್ ಪಂದ್ಯಗಳಲ್ಲಿ ಆಡಲು ಕರ್ನಾಟಕದ ಸ್ಟುವರ್ಟ್ ಬಿನ್ನಿಗೆ ಅವಕಾಶ ಸಿಕ್ಕಿದೆ. ಗಾಯಗೊಂಡಿರುವ ವರುಣ್ ಆರೋನ್ ಅವರ ಬದಲಿಗೆ ಸ್ಟುವರ್ಟ್ ಬಿನ್ನಿ ಭಾರತ ತಂಡವನ್ನು ಸೇರಲಿದ್ದಾರೆ ಎಂದು ಬಿಸಿಸಿಐ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಇದೇ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಮತ್ತು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಗೆ ಆಯ್ಕೆ ಮಾಡಲು ಸಭೆ ಸೇರಬೇಕಿದ್ದ ಆಯ್ಕೆ ಸಮಿತಿಯ ಭೇಟಿ ಮುಂದೂಡಲಾಗಿದೆ. ಈ ಸರಣಿಗೆ ಕರ್ನಾಟಕದ ಬ್ಯಾಟ್ಸ್ ಮನ್ ರಾಹುಲ್ ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿ ದಟ್ಟವಾಗಿತ್ತು.