ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಡ್ರಾ ಕಂಡ ಕೋಲ್ಕತ್ತಾ -ಚೆನ್ನೈ

ಅಟ್ಲೆಟಿಕೊ ಡಿ ಕೊಲ್ಕತ್ತಾ ಮತ್ತು ಚೆನ್ನೈಯಿನ್ ಎಫ್‌ಸಿ ತಂಡಗಳ ನಡುವೆ ನಡೆದ ಇಂಡಿಯನ್ ಸೂಪರ್ ಲೀಗ್...

Rashmi Kasaragodu
Updated On : 5 Nov 2014, 9:34 am

ಚೆನ್ನೈ: ಅಟ್ಲೆಟಿಕೊ ಡಿ ಕೊಲ್ಕತ್ತಾ ಮತ್ತು ಚೆನ್ನೈಯಿನ್ ಎಫ್‌ಸಿ ತಂಡಗಳ ನಡುವೆ ನಡೆದ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಪಂದ್ಯ 1-1 ಗೋಲಿನಿಂದ ಡ್ರಾದಲ್ಲಿ ಅಂತ್ಯಗೊಂಡಿದೆ.

ಜವಾಹರ್‌ಲಾಲ್ ನೆಹರು ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಅಟ್ಲೆಟಿಕೋ ಡಿ ಕೋಲ್ಕತಾ ಮತ್ತು ಚೆನ್ನೈಯಿವ್ ಎಫ್ ಸಿ ತಂಡಗಳ ಆರಾಟಗಾರರು ಉತ್ತಮ ಹೋರಾಟ ನಡೆಸಿದರೂ ಸಹ ನಿಚ್ಚಳ ಜಯ ದಾಖಲಿಸುವಲ್ಲಿ ವಿಫವಾದವು.

ಮೊದಲ ಅವಧಿಯಲ್ಲಿಯೇ ದೊರೆತ ಪೆನಾಲ್ಟಿ ಶೂಟೌಟ್ ಅವಕಾಶವನ್ನು ಸದ್ಭಳಕೆ ಮಾಡಿಕೊಂಡ ಅಟ್ಲೆಟಿಕೋ ಡಿ ಕೋಲ್ಕತ್ತಾ ತಂಡದ ಆಟಗಾರರು ನಿಚ್ಚಳ ಗೆಲುವಿನತ್ತ ಮುಖ ಮಾಡಿದ್ದರು. ಪಂದ್ಯದ 35ನೇ ನಿಮಿಷದಲ್ಲಿ ಜಾವಿಯರ್ ಗಾರ್ಸಿಯಾ ಸ್ಯಾಂಜೊ ಗೋಲು ಗಳಿಸುವ ಮೂಲಕ ಕೊಲ್ಕತ್ತಾ ತಂಡಕ್ಕೆ 1-0 ಗೋಲಿನ ಮುನ್ನಡೆಯೊಂದಿಗೆ ಶುಭಾರಂಭ ಒದಗಿಸಿದರು. ಆದರೆ ಪಂದ್ಯದ ಕೊನೆಯ ಘಟ್ಟದಲ್ಲಿ ಚೆನ್ನೈಯಿನ್‌ಗೆ ಪೆನಾಲ್ಟಿ ಶೂಟೌಟ್ ಅವಕಾಶ ನೀಡುವುದರೊಂದಿದೆ ಗೆದ್ದೇ ಬಿಟ್ಟೆವು ಎನ್ನುವ ಮನಸ್ಥಿತಿಯಲ್ಲಿದ್ದ ಕೊಲ್ಕತ್ತಾ ಆಟಗಾರರಿಗೆ ದೊಡ್ಡ ಶಾಕ್ ತಗುಲಿದಂತಾಯಿತು. 90ನೇ ನಿಮಿಷದಲ್ಲಿ ದೊರೆತ ಈ ಅವಕಾಶದಲ್ಲಿ ಬ್ಲೂಮರ್ ಎಲಾನೊ ಆಕರ್ಷಕ ಗೋಲು ಗಳಿಸುವುದರೊಂದಿಗೆ ಚೆನ್ನೈಯಿನ್ ತಂಡವನ್ನು ಸೋಲಿನಿಂದ ಪಾರು ಮಾಡಿದರು.

ಈ ಡ್ರಾನೊಂದಿಗೆ ಅಟ್ಲೆಟಿಕೋ ತಂಡ 6 ಪಂದ್ಯಗಳಲ್ಲಿ 3 ಜಯ , 3 ಡ್ರಾ ಫಲಿತಾಂಶದೊಂದಿಗೆ  ಅಂಕ ಗಳಿಕೆಯನ್ನು 12ಕ್ಕೆ ಹೆಚ್ಚಿಸಿಕೊಂಡು ನಂಬರ್ 1 ಸ್ಥಾನವನ್ನು ಕಾಪಾಡಿಕೊಂಡಿತು. ಅಲ್ಲದೇ, ಈವರೆಗೆ ಸೋಲರಿಯದ ತಂಡವಾಗಿಯೇ ಮುನ್ನಡೆಯುವಲ್ಲಿ ಸಹ ಕೋಲ್ಕತ್ತಾ ಸಫಲವಾಯಿತು.

ಮತ್ತೊಂದೆಡೆ ಅತಿಥೇಯ ಚೆನ್ನೈಯಿನ್ ತಂಡಕ್ಕೂ ಸಹ ಮೇಲುಗೈ ಸಾಧಿಸುವ ಕೆಲ ಉತ್ತಮ ಅವಕಾಶಗಳು ಲಭಿಸಿದ್ದವು. ಆದರೆ, ಯಶಸ್ಸು ಕಾಣಲಾಗದೇ ಅಂತಿಮವಾಗಿ ಡ್ರಾ ಫಲಿತಾಂಶಕ್ಕೆ ತೃಪ್ತಿ ಹೊಂದಬೇಕಾಯಿತು. ಒಂದು ವೇಳೆ ಈ ಪಂದ್ಯದಲ್ಲಿ ಚೆನ್ನೈಯಿನ್ ಪಡೆ ಜಯಗಳಿಸಿದ್ದರೆ, ಅಟ್ಲಿಕೋ ತಂಡವನ್ನು ಎರಡನೇ ಸ್ಥಾನಕ್ಕಿಳಿಸಿ ನಂಬರ್ ಒನ್ ಸ್ಥಾನಕ್ಕೇರುವ ಉತ್ತಮ ಅವಕಾಶವಿತ್ತು. ಚೆನ್ನೈಯಿನ್ 5 ಪಂದ್ಯಗಳಲ್ಲಿ 3 ಜಯ, 1 ಡ್ರಾ ಮತ್ತು 1 ಸೋಲಿನೊಂದಿಗೆ 10 ಅಂಕಗಳಿಸಿ 8 ತಂಡಗಳ ಲೀಗ್ ಪಟ್ಟಿಯಲ್ಲಿ ಎರಡನ ಸ್ಥಾನದಲ್ಲಿಯೇ ಉಳಿಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement