ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸಚಿನ್ ಆತ್ಮಕತೆ ಇಂದು ಲೋಕಾರ್ಪಣೆ

ಕ್ರಿಕೆಟ್ ಲೋಕದ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಆತ್ಮಕತೆ 'ಪ್ಲೇಯಿಂಗ್ ಇಟ್ ಮೈ ವೇ' ...

Rashmi Kasaragodu
Updated On : 5 Nov 2014, 11:55 am

ನವದೆಹಲಿ: ಕ್ರಿಕೆಟ್ ಲೋಕದ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಆತ್ಮಕತೆ 'ಪ್ಲೇಯಿಂಗ್ ಇಟ್ ಮೈ ವೇ' ಬುಧವಾರ ಸಂಜೆ ವೇಳೆಗೆ ಲೋಕಾರ್ಪಣೆಯಾಗಲಿದೆ.

ಪುಸ್ತಕ ಲೋಕಾರ್ಪಣೆಯಾಗುವ ಮುನ್ನವೇ ಸಚಿನ್ ಬಹಿರಂಗ ಪಡಿಸಿರುವ ಕೆಲವೊಂದು ವಿಷಯಗಳು ಜನರಲ್ಲಿ ಅಚ್ಚರಿ ಹಾಗೂ ಕುತೂಹಲವನ್ನು ಮೂಡಿಸಿದೆ.

ಟೀಂ ಇಂಡಿಯಾದ ಮಾಜಿ ಕೋಚ್ ಗ್ರೇಗ್ ಚಾಪೆಲ್ ಒಬ್ಬ ರಿಂಗ್ ಮಾಸ್ಟರ್‌ನಂತೆ ವರ್ತಿಸುತ್ತಿದ್ದರು. ಸರ್ವಾಧಿಕಾರಿ ಧೋರಣೆಯುಳ್ಳ ಚಾಪೆಲ್ ತಮ್ಮ ಚಿಂತನೆಗಳನ್ನು ಬಲವಂತವಾಗಿ ಇತರ ಆಟಗಾರರ ಮೇಲೆ ಹಾಕುತ್ತಿದ್ದರು. ಆಗ ತಂಡದ ನಾಯಕರಾಗಿದ್ದ ರಾಹುಲ್ ದ್ರಾವಿಡ್‌ಗೆ ಚಾಪೆಲ್ ಯಾವುದೇ ಗೌರವವನ್ನು ನೀಡುತ್ತಿರಲಿಲ್ಲ, ತಂಡದ ಕೋಚ್ ಆಗಿ ಗ್ರೇಗ್ ಚಾಪೆಲ್ ನಾಯಕನ ಬಗ್ಗೆ ಸ್ವಲ್ಪವೂ ಗೌರವ ತೋರದಿರುವುದು ಅಚ್ಚರಿ ಮೂಡಿಸಿತು ಎಂದು ಸಚಿನ್ ತಮ್ಮ ಆತ್ಮಕತೆಯಲ್ಲಿ ಬಹಿರಂಗಪಡಿಸಿದ್ದಾರೆ.

ಡ್ರಾವಿಡ್ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿ, ನೀನೇ ನಾಯಕನಾಗು ಎಂದು ಚಾಪೆಲ್ ಹೇಳಿದ್ದರು. 2007ರ ವಿಶ್ವಕಪ್ ಆರಂಭವಾಗಲು ಒಂದೇ ತಿಂಗಳು ಬಾಕಿ ಇರುವಾಗ ಭಾರತ ತಂಡದ ನಾಯಕತ್ವವನ್ನು ರಾಹುಲ್ ದ್ರಾವಿಡ್‌ರಿಂದ ಕಸಿದುಕೊಳ್ಳಲು  ಚಾಪೆಲ್ ನಿರ್ಧರಿಸಿರುವುದಾಗಿ ಹೇಳಿದ್ದರು ಎಂದು ಸಚಿನ್,  ಚಾಪೆಲ್ ವಿರುದ್ಧ ಅಸಹನೆ ವ್ಯಕ್ತ ಪಡಿಸಿದ್ದಾರೆ.

ಚಾಪೆಲ್ ಬಗ್ಗೆ ಸಚಿನ್ ಹೇಳಿಕೆಗೆ ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್, ಜಹೀರ್ ಖಾನ್ ಮತ್ತು ಹರ್ಭಜನ್ ಸಿಂಗ್ ಸಹಮತ ಸೂಚಿಸಿದ್ದರು.

ಈಗಾಗಲೇ ಸಚಿನ್ ತಮ್ಮ ಆತ್ಮಕತೆಯಲ್ಲಿ ಹೇಳಿರುವ ಕೆಲವೊಂದು ವಿಷಯಗಳು ಬಹಿರಂಗವಾಗಿದ್ದು, ಇನ್ನು ಹೇಳದೇ ಉಳಿದಿರುವ ವಿಷಯಗಳ ಬಗ್ಗೆ ಜನರು ಕುತೂಹಲಿಗಳಾಗಿದ್ದಾರೆ. ಸಚಿನ್ ಮತ್ತು ಬಾಲ್ಯದ ಗೆಳೆಯ ವಿನೋದ್ ಕಾಂಭ್ಲಿ ಜತೆಗಿನ ಸಂಬಂಧ ಹಳಸಿದ್ದು ಹೇಗೆ? ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ಬಗ್ಗೆ, ಮ್ಯಾಚ್ ಫಿಕ್ಸಿಂಗ್, ಮಂಕೀಗೇಟ್ ಪ್ರಕರಣ ಮೊದಲಾದ ಸಂದರ್ಭಗಳು ಸಚಿನ್ ಮೇಲೆ ಯಾವ ರೀತಿ ಪರಿಣಾಮ ಬೀರಿದ್ದವು? ಎಂಬೆಲ್ಲಾ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಆದಾಗ್ಯೂ, ನವೆಂಬರ್ 6 ರಂದು 'ಪ್ಲೇಯಿಂಗ್ ಇಟ್ ಮೈ ವೇ' ಕೃತಿ ಲೋಕಾರ್ಪಣೆಯಾಗುವುದು ಎಂದು ಹೇಳಲಾಗಿತ್ತಾದರೂ, ಇದೀಗ ಬಲ್ಲಮೂಲಗಳು ಕೃತಿ ಬುಧವಾರ ಲೋಕಾರ್ಪಣೆಯಾಗಲಿದೆ ಎಂದು ಹೇಳಿವೆ. ಈ ಕೃತಿಯ ಪ್ರೋಮೋಗಳು ಕೂಡಾ ಯೂಟ್ಯೂಬ್‌ನಲ್ಲಿ ಹೆಚ್ಚು ಜನಪ್ರಿಯವಾಗಿದ್ದು  ಓದುಗರು ಪ್ರಸ್ತುತ ಪುಸ್ತಕವನ್ನು ಓದಲು ಉತ್ಸುಕರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement