ಸಾಂದರ್ಭಿಕ ಚಿತ್ರ- ಮಾಯಾಂಕ್ ಅಗರ್‌ವಾಲ್ 
ಕ್ರೀಡೆ

ಮಾಯಾಂಕ್ ಮೋಡಿಗೆ ಆಂಧ್ರಪ್ರದೇಶ ಮಂದ

ಮಾಯಾಂಕ್ ಅಗರ್‌ವಾಲ್(162) ಶತಕ ಮತ್ತು ಮನೀಷ್ ಪಾಂಡೆ(75) ಅರ್ಧಶತಕದ ನೆರವಿನೊಂದಿಗೆ ಕರ್ನಾಟಕ...

ಸಿಕಂದರಾಬಾದ್: ಮಾಯಾಂಕ್ ಅಗರ್‌ವಾಲ್(162) ಶತಕ ಮತ್ತು ಮನೀಷ್ ಪಾಂಡೆ(75) ಅರ್ಧಶತಕದ ನೆರವಿನೊಂದಿಗೆ ಕರ್ನಾಟಕ ತಂಡ ದಕ್ಷಿಣವಲಯ ವಿಜಯ್ ಹಜಾರೆ ಟ್ರೋಫಿಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಆಂಧ್ರದ ವಿರುದ್ಧ 134 ರನ್‌ಗಳ ಭಾರೀ ಅಂತರದಿಂದ ಜಯ ಕಂಡುಕೊಂಡಿತ್ತು.

ಈ ಇಬ್ಬರ ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ಕರ್ನಾಟಕ ತಂಡ ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 330 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಂಧ್ರ 47.4 ಓವರ್‌ಗಳಲ್ಲಿ 196 ರನ್ ಗಳಿಸುತ್ತಿದ್ದಂತೆಯೇ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಹೀಗಾಗಿ ಹೆಚ್ಚಿನ ಅತಂರದಿಂದ ಸೋಲೋಪ್ಪಿಕೊಳ್ಳಬೇಕಾಯಿತು.

ಆಂದ್ರದ ಪರ ಮೊಹ್ಮದ್ 54, ಶಿವಕುಮಾರ್ 40, ರಿಕ್ಕಿಭುಯಿ 34 ರನ್ ಗಳಿಸಿದರೆ, ಇತರ ಬ್ಯಾಟ್ಸ್‌ಮನ್‌ಗಳು ಕರ್ನಾಟಕದ ಬೌಲಿಂಗ್ ದಾಳಿಯನ್ನು ಎದುರಿಸುವಲ್ಲಿ ವಿಫಲರಾದದ್ದು ಸೋಲಿಗೆ ಪ್ರಮುಖ ಕಾರಣವಾಯಿತು.

ಕರ್ನಾಟಕ ಪರ ಅಭಿಮನ್ಯು ಮಿಥುನ್ 4 ವಿಕೆಟ್ ಪಡೆದರೆ, ಉದಿತ್ ಪಟೇಲ್ 3 ಹಾಗೂ ವಿನಯ್ ಕುಮಾರ್ ಮತ್ತು ಎಚ್. ಎಸ್ ಶರತ್ ತಲಾ ಒಂದು ವಿಕೆಟ್ ಪಡೆದರು.

ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಕರ್ನಾಟಕಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಆರಂಭಿಕ ಆಟಗಾರರಾದ ರಾಬಿನ್ ಉತ್ತಪ್ಪ(8) ಮತ್ತು ಕೆ.ಎಲ್. ರಾಹುಲ್(17) ಬೇಗನೆ ಪೆವಿಲಿಯನ್ ಸೇರುವ ಮೂಲಕ ನಿರಾಸೆ ಮೂಡಿಸಿದ್ದರು. ಆದರೆ, ನಂತರ ಮಾಯಾಂಕ್ ಮತ್ತು ಪಾಂಡೆ ಕ್ರೀಸ್‌ಗೆ ಕಚ್ಚಿ ನಿಲ್ಲುವ ಮೂಲಕ ಅದ್ಭುತ ಜತೆಯಾಟ ಪ್ರದರ್ಶಿಸಿದರು. ಇಬ್ಬರ ಜತೆಯಾಟದಲ್ಲಿ 3ನೇ ವಿಕೆಟ್‌ಗೆ ಭರ್ಜರಿ 147 ರನ್ ಕಲೆ ಹಾಕಿದರು.

ಕೇವಲ 136 ಎಸೆತಗಳನ್ನು ಎದುರಿಸಿದ ಮಾಯಾಂಕ್ ಶತಕದಲ್ಲಿ 3 ಸಿಕ್ಸರ್ ಮತ್ತು 22 ಬೌಂಡರಿಗಳು ಸೇರಿದ್ದರೆ, 63 ಎಸೆತಗಳನ್ನು ಎದುರಿಸಿದ ಪಾಂಡೆ ಅರ್ಧಶತಕದಲ್ಲಿ 3 ಸಿಕ್ಸರ್ ಮತ್ತು 9 ಬೌಂಡರಿಗಳು ಸೇರಿದ್ದವು.

ಆಂಧ್ರದ ಪರ ಬಂಡಾರು ಅಯ್ಯಪ್ಪ 4 ವಿಕೆಟ್ ಕಬಳಿಸಿದರೆ, ಡಿ. ಶಿವಕುಮಾರ್, ಸ್ಪೀಫನ್ ಹಾಗೂ ಬಿ ಸುಧಾಕರ್ ತಲಾ ಒಂದು ವಿಕೆಟ್ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!