ಬೆಂಗಳೂರು: ಪ್ರಸಕ್ತ ವರ್ಷದಲ್ಲಿ ನಾಲ್ಕು ವಿಶ್ವ ಚಾಂಪಿಯನ್ಶಿಪ್ ಗೆಲ್ಲುವ ಮೂಲಕ ಅತ್ಯಾಕರ್ಷಕ ಪ್ರದರ್ಶನ ನೀಡುತ್ತಿರುವ ಪಂಕಜ್ ಆಡ್ವಾಣಿ, ನವೆಂಬರ್ 16ರಿಂದ 29ರವರೆಗೆ ನಡೆಯಲಿರುವ, ಭಾರತೀಯ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಫೆಡರೇಷನ್(ಐಬಿಎಸ್ಎಸ್) ವಿಶ್ವ ಸ್ನೂಕರ್ ಚಾಂಪಿಯನ್ಶಿಪ್ನಲ್ಲಿ ಇದೇ ಲಯವನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಇಂಗ್ಲೆಂಡ್ನಿಂದ ಮರಳಿದ ನಂತರ ರಾಜ್ಯ ಬಿಲಿಯರ್ಡ್ಸ್ ಸಂಸ್ಥೆಯಲ್ಲಿ ಶನಿವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಆಡ್ವಾಣಿ ಮಾಧ್ಯಮದೊಂದಿಗೆ ಮಾತನಾಡಿದರು. ಸನ್ಮಾನದೊಂದಿಗೆ ಆಡ್ವಾಣಿ ಅವರಿಗೆ ಭಾರತೀಯ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಫೆಡರೇಷನ್ ಕಾರ್ಯದರ್ಶಿ
ಎಸ್.ಬಾಲಸುಬ್ರಮಣ್ಯನ್ ರೂ3.5 ಲಕ್ಷ ನಗದು ಬಹುಮಾನ ನೀಡಿದರು. ಇನ್ನು ಕರ್ನಾಟಕದ ರಾಜ್ಯ ಬಿಲಿಯರ್ಡ್ಸ್ ಸಂಸ್ಥೆ ಸಹ ಆಡ್ವಾಣಿಗೆ ರೂ. 1.5ಲಕ್ಷ ನಗದು ಬಹುಮಾನ ನೀಡಿತು.
'ಸೋಲು ಮತ್ತು ಗೆಲುವು ಕ್ರೀಡೆಯ ಭಾಗಗಳು. ನಾನು ಫಲಿತಾಂಶದ ಬಗ್ಗೆ ಚಿಂತಿಸುತ್ತಿಲ್ಲ. ಆದರೆ, ನಾನು ಉತ್ತಮ ಪ್ರದರ್ಶನ ನೀಡಲು ಯತ್ನಿಸುತ್ತೇನೆ. ಈ ವರ್ಷ ನನಗೆ ದೊಡ್ಡ ಮತ್ತು ಅದೃಷ್ಟ ತರುವಂತಹದ್ದು ಆಗಿದೆ. ಆದರೆ, ನಾನು ಕಠಿಣ ಪರಿಶ್ರಮಪಡುವ ಅಗತ್ಯವಿದೆ' ಎಂದು ವಿಶ್ವ ತಂಡ ಚಿನ್ನದ ಪದ ಗೆಲ್ಲುವುದರೊಂದಿಗೆ ವಿಶ್ವ-ರೆಡ್ ಸ್ನೂಕರ್ ಪ್ರಶಸ್ತಿ ಹಾಗೂ ವಿಶ್ವ ಬಿಲಿಯರ್ಡ್ಸ್ನ ಎರಡೂ ಮಾದರಿಯಲ್ಲಿ ಪ್ರಶಸ್ತಿ ಗೆದ್ದ ಆಡ್ವಾಣಿ ಅಭಿಪ್ರಾಯಪಟ್ಟಿದ್ದಾರೆ.
ಕೇವಲ 29 ವರ್ಷದ ಆಡ್ವಾಣಿ ಅವರು ಆಗಾಗಲೇ 12 ವಿಶ್ವ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಅಲ್ಲದೆ, 2003ರಲ್ಲಿ ಐಬಿಎಫ್ ವಿಶ್ವ ಸ್ನೂಕರ್ ಚಾಂಪಿಯನ್ಶಿಪ್ ಗೆದ್ದುಕೊಂಡಿರುವ ಆಡ್ವಾಣಿ ಈ ವರ್ಷ ಮತ್ತೊಂದು ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಕೇವಲ 11 ವರ್ಷದವರಾಗಿದ್ದಾಗ ತಮ್ಮ ಹಿರಿಯ ಸೋದರ ಶ್ರೀ ಅವರನ್ನು ಸೋಲಿಸುವ ಮೂಲಕ ಉಂಟುಮಾಡಿದ್ದ ಆಡ್ವಾಣಿ, ಇತ್ತೀಚೆಗೆ ಫಾರ್ಮ್ಗೆ ಮರಳಿದ್ದಾರೆ.
'2011 ಮತ್ತು 2012ರ ಎರಡು ವರ್ಷಗಳ ವೃತ್ತಿಪರತೆ, ಸ್ನೂಕರ್ ವಿಭಾಗದಲ್ಲಿ ನನಗೆ ಹೆಚ್ಚಿನ ನೆರವು ನೀಡಿದೆ. ಇದು ನನ್ನ ಪ್ರದರ್ಶನ ಮತ್ತು ಮಾನಸಿಕವಾಗಿ ಫಿಟ್ ಆಗಲು ನನಗೆ ನೆರವಾಗಿದೆ. ಹೀಗಾಗಿ ನಾನು ಸ್ನೂಕರ್ನಲ್ಲಿ ಹೆಚ್ಚಿನ ಪ್ರತಿಭೆಯನ್ನು ತೋರಲು ನೆರವಾಗಿದೆ' ಎಂದಿದ್ದಾರೆ.
'ಟೇಬಲ್ಗಳ ಮೇಲೆ ಆಡುತ್ತಿರುವಾಗ ಒತ್ತಡವನ್ನು ನಿಭಾಯಿಸುವ ಕುರಿತು ನಾನು ಕಲಿತಿದ್ದೇನೆ. ಹೀಗಾಗಿ ನಾನು ಈಗ ಉನ್ನತ ಪಂದಾಯವಳಿಗಳಲ್ಲಿ ಗೆಲವು ಸಾಧಿಸುತ್ತಿದ್ದೇನೆ. ಈ ಹಿಂದೆ ಅನುಭವಿಸುತ್ತಿದ್ದ ತಳಮಳ ಈಗ ನನ್ನಲ್ಲಿ ಇಲ್ಲವಾಗಿದೆ. ಬಿಲಿಯರ್ಡ್ಸ್ ಆಟಗಾರನಾಗಿ ನಾನು ಪ್ರತಿಭೆ, ಸಾಮಾರ್ಥ್ಯವನ್ನು ಹೊಂದಿದ್ದರಿಂದ ನನ್ನನ್ನು ಗುರುತಿಸುತ್ತಾರೆ. ಆದರೆ, ಭಾರತೀಯ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಫೆಡರೇಷನ್ ಮತ್ತು ಕರ್ನಾಟಕ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಸಂಸ್ಥೆ ಹಾಗೂ ನನಗೆ ಕೆಲಸ ನೀಡಿರುವ ಒಎನ್ಜಿಸಿಗೂ ನಾನು ಈ ಸಮಯದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ' ಎಂದು ಈ ಸಮಯದಲ್ಲಿ ಆಡ್ವಾಣಿ ತಿಳಿಸಿದರು.
ಭಾರತೀಯ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಫೆಡರೇಷನ್ ಇದೇ ಸಂದರ್ಭದಲ್ಲಿ ವಿಶ್ವ ಮಹಿಳೆಯರ ಬಿಲಿಯರ್ಡ್ಸ್ನಲ್ಲಿ ಬೆಳ್ಳಿ ಗೆದ್ದ ಉಮಾದೇವಿ ನಾಗರಾಜ್ ಮತ್ತು ಆಸ್ಟ್ರೇಲಿಯಾ ಓಪನ್ ಸ್ನೂಕರ್ ಚಾಂಪಿಯನ್ಶಿಪ್ನಲ್ಲಿ ಕಂಚು ಗೆದ್ದ ವಿದ್ಯಾ ಪಿಳ್ಳೈ ಅವರನ್ನೂ ಸನ್ಮಾನಿಸಲಾಯಿತು.