ನವದೆಹಲಿ: ಭಾರತೀಯ ಹಾಕಿ ಫೆಡರೇಷನ್ ಹಾಕಿ ಇಂಡಿಯಾ ವಾರ್ಷಿಕ ಪ್ರಶಸ್ತಿ ಘೋಷಣೆ ಮಾಡಿದೆ.
ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಉತ್ತಮ ಆಟಗಾರರನ್ನು ಆಯ್ಕೆ ಮಾಡಿ ಪ್ರತೀ ವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಆಟಗಾರರನ್ನು ಉತ್ತೇಜಿಸುವ ಸಲುವಾಗಿ ನಾವು ಈ ಪ್ರಶಸ್ತಿ ನೀಡುತ್ತಿದ್ದು, ಇದರಿಂದಾಗಿ ಅವರ ಉತ್ಸಾಹ ಹೆಚ್ಚಾಗುತ್ತದೆ ಎಂದು ಹಾಕಿ ಇಂಡಿಯಾ ಕಾರ್ಯದರ್ಶಿ ಜನರಲ್ ಮುಶ್ತಾಖೀ ಅಹ್ಮದ್ ಹೇಳಿದ್ದಾರೆ.
ಹಾಕಿ ಇಂಡಿಯಾ ಅಧ್ಯಕ್ಷ ಡಾ. ನರೀಂದರ್ ಬಾತ್ರಾ ಅವರ ಪುತ್ರ ಇತ್ತೀಚೆಗೆ ಮರಣಹೊಂದಿದ್ದು, ಈತನ ಸ್ಮರಣೆಗಾಗಿ ಈ ಬಾರಿ ವೈಯಕ್ತಿಕ ಟ್ರೋಫಿ ನೀಡಲು ಹಾಕಿ ಇಂಡಿಯಾ ತೀರ್ಮಾನಿದೆ.
ಸೋಮವಾರ ನಡೆದ ಹಾಕಿ ಇಂಡಿಯಾ ಎಕ್ಸಿಕ್ಯೂಟಿವ್ ಬೋರ್ಡ್ ಸಭೆಯಲ್ಲಿ ಪ್ರಶಸ್ತಿಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಪ್ರಶಸ್ತಿಗಳ ವಿವರ ಇಂತಿದೆ
ಧ್ರುವ್ ಬಾತ್ರಾ ಪ್ಲೇಯರ್ ಆಫ್ ದ ಇಯರ್ (ಪುರುಷ) -ರು. 25,00000
ಧ್ರುವ್ ಬಾತ್ರಾ ಪ್ಲೇಯರ್ ಆಫ್ ದ ಇಯರ್ (ಮಹಿಳೆ) -ರು. 25,00,000
ಭರವಸೆಯ ಕ್ರೀಡಾಪಟು (ಪುರುಷ ವಿಭಾಗ- 21 ವರ್ಷ ಕೆಳಗಿನ ವಯಸ್ಸು) -ರು. 10,00,000
ಭರವಸೆಯ ಕ್ರೀಡಾಪಟು (ಮಹಿಳಾ ವಿಭಾಗ- 21 ವರ್ಷ ಕೆಳಗಿನ ವಯಸ್ಸು) -ರು. 10,00,000
ಗೋಲ್ ಕೀಪರ್ ಆಫ್ ದ ಇಯರ್ - ರು. 5,00,000
ಡಿಫೆಂಡರ್ ಆಫ್ ದ ಇಯರ್ - ರು. 5,00,000
ಮಿಡ್ ಫೀಲ್ಡ್ ಆಫ್ ದ ಇಯರ್- ರು.5,00,000
ಫಾರ್ವರ್ಡ್ ಆಫ್‌ದ ಇಯರ್ -ರು.5,00,000
ಅಮೂಲ್ಯ ಕೊಡುಗೆ ನೀಡಿದವರಿಗೆ (ಕೋಚ್ ಮತ್ತು ಸಪೋರ್ಟ್ ಸ್ಟಾಫ್‌ಗಳಿಗೆ ) - ರು. 5,00,000
ಮಹೋನ್ನತ ಸಾಧನೆಗಾಗಿರುವ ಪ್ರಶಸ್ತಿ - ರು . 5,00,000.