ಮಂಗಳೂರು: ನವೆಂಬರ್ ನ ಆಸ್ಟ್ರೆಲಿಯಾ ಟೆಸ್ಟ್ ಸರಣಿಗೆ ಭಾರತೀಯ ಕ್ರಿಕೆಟ್ ತಂಡಕ್ಕೆ ಕನ್ನಡಿಗ ಕಣ್ಣೂರು ಲೋಕೇಶ್ ರಾಹುಲ್ ಆಯ್ಕೆಯಾದದ್ದಕ್ಕೆ ಕರ್ನಾಟಕದ ಅದರಲ್ಲೂ ಮಂಗಳೂರು ಜನತೆ ಹರ್ಷಗೊಂಡಿದ್ದಾರೆ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್ ಐ ಟಿ ಕೆ) ಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿರುವ ರಾಹುಲ್ ಅವರ ತಂದೆ ಲೋಕೇಶ್ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಪದವಿಪೂರ್ವ ಕಾಲೇಜಿನಲ್ಲಿ ಉಪ ಪ್ರಾಧ್ಯಾಪಕಾರಿಗಿ ಕೆಲಸ ಮಾಡುತ್ತಿರುವ ತಾಯಿ ರಾಜೇಶ್ವರಿ ಅವರಿಗೆ ಅತೀವ ಸಂತಸವಾಗಿದೆ. ಸದ್ಯಕ್ಕೆ ಇವರು ತಮ್ಮ ಮಗಳು ಭಾವನ ಆವರ ನಿಶ್ಚಿತಾರ್ಥ ಸಮಾರಂಭದ ಸಿದ್ಧತೆಗಾಗಿ ಬೆಂಗಳೂರಿನಲ್ಲಿದ್ದಾರೆ.
"ನನಗೆ ಹೆಚ್ಚು ನೆನಪಿನಲ್ಲಿ ಉಳಿಯುವ ಪಂದ್ಯವೆಂದರೆ, ೧೩ ರ ಕೆಳಗಿನ ಕರ್ನಾಟಕ ತಂಡಕ್ಕೆ ಆಡುವಾಗ ಎರಡು ದ್ವಿಶತಕಗಳನ್ನು ಅವನು ಗಳಿಸಿದ್ದ. ಆಗ ಅವನು ಸಣ್ಣವನು ಮತ್ತು ಅವನ ಕ್ರಿಕೆಟ್ ವಸ್ತುಗಳ ಭಾರದ ಚೀಲವನ್ನು ಹೊತ್ತು ತರಲು ನಾನೇ ಸಹಾಯ ಮಾಡುತ್ತಿದ್ದೆ. ಆ ಎರಡು ದ್ವಿಶತಕಗಳ ನಂತರ ಅವನು ಹಿಂತಿರುಗಿ ನೋಡಿದ್ದೆ ಇಲ್ಲ. ೧೩ ರ ಕೆಳಗಿನ, 15 ರ ಕೆಳಗಿನ, ೧೭ರ ಕೆಳಗಿನ ೧೯ ರ ಕೆಳಗಿನ ಎಲ್ಲ ತಂಡಗಳ ನಾಯಕನಾಗಿದ್ದ ಹಾಗೂ ೧೯ರ ಕೆಳಗಿನ ವಿಶ್ವಕಪ್ ಸರಣಿಗೂ ಭಾರತ ತಂಡಕ್ಕೆ ಆಯ್ಕೆಯಾಗಿದ್ದ" ಎನ್ನುತ್ತಾರೆ ಲೋಕೇಶ್.
"ಅವನು ೩ ವರ್ಷದವನಾಗಿದ್ದಲಿಂದಲು ಕ್ರಿಕೆಟ್ ಬ್ಯಾಟನ್ನು ಆಟಿಕೆಯಾಗಿ ಇಟ್ಟುಕೊಂಡಿದ್ದ. ಅವನು ಮೊದಲು ಲೆದರ್ ಬಾಲಿನಲ್ಲಿ ಆಟವಾಡಿದ್ದು ೧೧ ವಯಸ್ಸಿನಲ್ಲಿ. ಅವನು ಆ ವಯಸ್ಸಿನಲ್ಲಿ ಕೂಡ ಖಚಿತತೆಯಿಂದ, ಗುರಿಯುಳ್ಳವನಾಗಿದ್ದ" ಎನ್ನುತ್ತಾರೆ ಅವರು.