ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಜೊಕೊವಿಚ್ ಚಾಂಪಿಯನ್

ನೊವಾಕ್ ಜೊಕೊವಿಚ್
Vishwanath S
Updated On : 18 Nov 2014, 11:57 am

ಲಂಡನ್: ವಿಶ್ವದ ನಂಬರ್ ಒನ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್, ವರ್ಷದ ಕೊನೆಯ ಎಟಿಪಿ ವಿಶ್ವ ಟೂರ್ ಫೈನಲ್ಸ್‌ನಲ್ಲಿ ಯಾವುದೇ ರೀತಿಯ ಪರಿಶ್ರಮಪಡದೇ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಪ್ರಶಸ್ತಿ ಸುತ್ತಿನಲ್ಲಿ ಜೊಕೊವಿಚ್‌ಗೆ ಸವಾಲು ಒಡ್ಡಬೇಕಾಗಿದ್ದ ಸ್ವಿಜರ್ ಲ್ಯಾಂಡ್‌ನ ರೋಜರ್ ಫೆಡರರ್, ಬೆನ್ನು ನೋವಿನ ಸಮಸ್ಯೆಯಿಂದಾಗಿ ಅಖಾಡಕ್ಕಿಳಿಯದೇ ಗುಡ್ ಬೈ ಹೇಳಿದ್ದೇ ಇದಕ್ಕೆ ಕಾರಣ.

ಕಳೆದ ಶನಿವಾರ ಸೆಮಿಫೈನಲ್ ಪಂದ್ಯದಲ್ಲಿ ಸ್ಯಾನಿಸ್ಲಾಸ್ ವಾವ್ರಿಂಕಾ ಎದುರು ಮೂರು ಗಂಟೆಗಳ ಕಾಲ ಹೋರಾಟ ನಡೆಸಿ ಅಂತಿಮವಾಗಿ ಗೆಲವು ತಮ್ಮದಾಗಿಸಿಕೊಂಡಿದ್ದ 33ರ ಫೆಡರರ್, ಫೈನಲ್ ಪಂದ್ಯಕ್ಕೆ ಫಿಟ್ ಆಗಿರಲಿಲ್ಲ. ಆದರೆ, ತಮ್ಮ ಈ ನಿರ್ಧಾರಕ್ಕೆ ಫೆಡರರ್, ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ. ಈ ಬಾರಿ ಚಾಂಪಿಯನ್ ಆಗುವದರೊಂದಿಗೆ ಜೊಕೊವಿಚ್, 1980ರಲ್ಲಿ ಇವಾನ್ ಲೆಂಡ್ಲ್ ಬಳಿಕ ಸತತ 3 ಬಾರಿ ವಿಶ್ವ ಟೂರ್ ಫೈನಲ್ಸ್ ಗೆದ್ದ ಮೊದಲ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement