ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಚಾಂಪಿಯನ್ಸ್ ಟ್ರೋಫಿಗೆ ಭಾರತ ಹಾಕಿ ತಂಡ ಪ್ರಕಟ

ಮುನ್ಪಡೆ ಆಟಗಾರ ಮಂದೀಪ್ ಸಿಂಗ್, ಸಂಪರ್ಕ ಆಟಗಾರ ಸತ್ಬೀರ್ ಸಿಂಗ್ ಮತ್ತು ರಕ್ಷಣಾ ಆಟಗಾರ ಹರ್ಬಿನ್ ಸಿಂಗ್ ...

ಭಾರತದ ಹಾಕಿ ತಂಡ
Lakshmi R
Updated On : 25 Nov 2014, 10:13 am

ನವದೆಹಲಿ: ತವರಿನಲ್ಲಿ ನಡೆಯಲಿರುವ ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿ ಹಾಕಿ ತಂಡ ಪ್ರಕಟಿಸಲಾಗಿದ್ದು, ಯುವ ಮುನ್ಪಡೆ ಆಟಗಾರ ಮಂದೀಪ್ ಸಿಂಗ್, ಸಂಪರ್ಕ ಆಟಗಾರ ಸತ್ಬೀರ್ ಸಿಂಗ್ ಮತ್ತು ರಕ್ಷಣಾ ಆಟಗಾರ ಹರ್ಬಿನ್ ಸಿಂಗ್ ಅವರನ್ನು ಕೈಬಿಡಲಾಗಿದೆ. ಈ ಮೂವರು ಆಟಗಾರರು ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರಾಷ್ಟ್ರೀಯ ತಂಡ ಪ್ರತಿನಿಧಿಸಿದ್ದರು.

ಚಾಂಪಿಯನ್ಸ್ ಟ್ರೋಫಿ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಬರುವ ಡಿಸೆಂಬರ್ 6 ರಿಂದ 14ರವರೆಗೆ ನಡೆಯಲಿದ್ದು, ಒಟ್ಟು 8 ತಂಡಗಳು ಪಾಲ್ಗೊಳ್ಳಲಿವೆ. ಈ ಪ್ರತಿಷ್ಠಿತ ಟೂರ್ನಿಗಾಗಿ ಹಾಕಿ ಇಂಡಿಯಾ ಒಟ್ಟು 18 ಸದಸ್ಯರ ಭಾರತ ಪುರುಷರ ತಂಡವನ್ನು ಸೋಮವಾರ ಪ್ರಕಟಿಸಲಿದೆ.

ಹಾಕಿ ಇಂಡಿಯಾ ಆಯ್ಕೆದಾರರಾದ ಹರ್ಬಿಂದರ್ ಸಿಂಗ್, ಆರ್.ಪಿ.ಸಿಂಗ್, ಅರ್ಜುನ್ ಹಾಲಪ್ಪ, ಉನ್ನತಮಟ್ಟದ ಪ್ರದರ್ಶನ ನಿರ್ದೇಶಕ ರೋಲಂಟ್ ಓಲ್ಟಮಸ್, ಕೋಚ್ ಜೂಡ್ ಫೆಲಿಕ್ಸ್ ಮತ್ತು ವೈಜ್ಞಾನಿಕ ಸಲಹೆಗಾರ ಮ್ಯಾಥ್ಯೂ ಅಯಲ್ಸ್ ಅವರು ನವೆಂಬರ್ 18 ರಂದು ಮೇಜರ್ ಧ್ಯಾನ್‌ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಆಯ್ಕೆ ಟ್ರಯಲ್ಸ್ ಮೂಲಕ ಅಂತಿಮ ತಂಡವನ್ನು ಆಯ್ಕೆ ಮಾಡಿದ್ದಾರೆ.

ಅನುಭವಿ ಮುನ್ಪಡೆ ಆಟಗಾರ ಸರ್ದಾರ್ ಸಿಂಗ್ ತಂಡದ ನಾಯಕನಾಗಿ ಮುಂದುವರಿದಿದ್ದು, ಪ್ರತಿಭಾನ್ವಿತ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಉಪನಾಯಕರಾಗಿದ್ದಾರೆ. ಈ ಇಬ್ಬರು ಆಟಗಾರರು ಅತಿ ಹೆಚ್ಚು ಪಂದ್ಯಗಳನ್ನಾಡಿದ್ದು ಸಾಕಷ್ಟು ಅನುಭವಿಗಳಾಗಿದ್ದು, ಇದು ತಂಡಕ್ಕೆ ಹೆಚ್ಚಿನ ರೀತಿಯಲ್ಲಿ ಲಾಭದಾಯಕವಾಗಿದೆ ಎಂಬುದು ಆಯ್ಕೆದಾರರ ಅಭಿಪ್ರಾಯವಾಗಿದೆ. ಸರ್ದಾರ್ ಸಿಂಗ್ 200 ಪಂದ್ಯಗಳನ್ನಾಡಿದ್ದರೆ, ಶ್ರೀಜೇಶ್ 115 ಪಂದ್ಯಗಳಲ್ಲಿ ತಮ್ಮ ಸಾಮಾರ್ಥ್ಯ ತೋರಿದ್ದಾರೆ.

ಭಾರತ ತಂಡ ಡಿ.6ರಂದು ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಒಲಿಂಪಿಕ್ಸ್ ಚಾಂಪಿಯನ್ ಜರ್ಮನಿ ತಂಡವನ್ನು ಎದುರಿಸಲಿದೆ. ಬಳಿಕ ಡಿ.7ರಂದು ಅರ್ಜೆಂಟಿನಾ ಮತ್ತು ಡಿ.9ರಂದು ಹಾಲೆಂಡ್ ತಂಡಗಳ ವಿರುದ್ಧ ಸೆಣಸಲಿದೆ. ತಂಡದ ಮುಖ್ಯ ಕೋಚ್ ಟೆರ್ರಿ ವಾಲ್ಶ್ ಅಧಿಕಾರವಧಿ ಕೊನೆಗೊಂಡಿರುವ ರೋಲಂಟ್ ಓಲ್ಟ್‌ಮಸ್ ಗರಡಿಯಲ್ಲಿ ಪಳಗುತ್ತಿದ್ದಾರೆ.

ಭಾರತ ತಂಡ:
ಗೋಲ್‌ಕೀಪರ್: ಪಿ.ಆರ್.ಶ್ರೀಜೇಶ್(ಉಪನಾಯಕ), ಹರ್ಜೋತ್ ಸಿಂಗ್
ರಕ್ಷಣಾ ವಿಭಾಗ: ರೂಪಿಂದರ್ ಪಾಲ್ ಸಿಂಗ್, ವಿ.ಆರ್.ರಘುನಾಥ್, ಬೀರೇಂದ್ರ ಲಾಕ್ರಾ, ಕೊಥಾಜಿತ್ ಸಿಂಗ್, ಗುರ್ಬಾಜ್ ಸಿಂಗ್, ಗುರ್ಜಿಂದರ್ ಸಿಂಗ್
ಸಂಪರ್ಕ ವಿಭಾಗ: ಮನ್‌ಪ್ರೀತ್ ಸಿಂಗ್, ಸರ್ದಾರ್ ಸಿಂಗ್(ನಾಯಕ), ಧರ್ಮವೀರ್ ಸಿಂಗ್, ದನಿಶ್ ಮುಜ್‌ತಬಾ, ಎಸ್.ಕೆ.ಉತ್ತಪ್ಪ
ಮುನ್ಪಡೆ ವಿಭಾಗ: ರಮಣದೀಪ್ ಸಿಂಗ್, ಎಸ್.ವಿ.ಸುನೀಲ್, ಆಕಾಶ್‌ದೀಪ್ ಸಿಂಗ್, ನಿಕ್ಕಿನ ತಿಮ್ಮಯ್ಯ, ಲಲಿತ್ ಉಪಾಧ್ಯಾಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement