ಬೆಂಗಳೂರು: ಆರಂಭಿಕ ಹಿನ್ನಡೆ ಅನುಭವಿಸಿದರೂ, ನಂತರ ಫಿನಿಕ್ಸ್‌ನಂತೆ ಪುಟಿದೆದ್ದ ಭಾರತದ ಸ್ನೂಕರ್ ತಾರೆ ಪಂಕಜ್ ಆಡ್ವಾಣಿ ಐಬಿಎಸ್‌ಎಫ್ ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್ ಅಂತಿಮ 32ರ ಸುತ್ತಿಗೆ ಪ್ರವೇಶಿಸಿದ್ದಾರೆ.
ಆದರೆ ಮತ್ತೊಬ್ಬ ಭರವಸೆಯ ಆಟಗಾರ ಕಮಲ್ ಚಾವ್ಲಾ, ಆಘಾತಕಾರಿ ಸೋಲನುಭವಿಸುವ ಮೂಲಕ ಟೂರ್ನಿಯಲ್ಲಿ ತಮ್ಮ ಅಭಿಯಾನವನ್ನು ಅಂತ್ಯಗೊಳಿಸಿದ್ದಾರೆ.
ಬುಧವಾರ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ನಾಕೌಟ್(ಅಂತಿಮ 64ರ) ಸುತ್ತಿನ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಪಂಕಜ್ ಆಡ್ವಾಣಿ, ತಮ್ಮ ಎದುರಾಳಿ ಬೆಲ್ಜಿಯಂನ ಥಾಮಸ್ ಸ್ಕಾಲ್‌ಸ್ಕಿ ವಿರುದ್ಧ 4-2(49-81, 37-47, 92-06, 61-37, 72-23, 83-37) ರೋಚಕ ಗೆಲವು ದಾಖಲಿಸಿದರು.
ಇನ್ನು ಮತ್ತೊಬ್ಬ ಭರವಸೆಯ ಆಟಗಾರ ಕಮಲ್ ಚಾವ್ಲಾ, ನಾಕೌಟ್ ಪಂದ್ಯದಲ್ಲಿ ಸೋಲನುಭವಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಆಸ್ಟ್ರೇಲಿಯಾದ ಆ್ಯಡ್ರಿಯಾನ್ ರಿಡ್ಲೆ ವಿರುದ್ಧ 4-3(70-46, 51-13, 63-13, 14--67, 33-47, 46-82, 06-79) ಫ್ರೇಮ್‌ಗಳ ಅಂತರದಲ್ಲಿ ಪರಾಭವಗೊಂಡರು. ಆರಂಭಿಕ 3 ಫ್ರೇಮ್‌ಗಳಲ್ಲಿ ಮುನ್ನಡೆ ಸಾಧಿಸಿ ಗೆಲವಿನ ಹೊಸ್ತಿಲಲ್ಲಿದ್ದ ಕಮಲ್ ಚಾವ್ಲಾ, ಗೆಲವಿನ ಹೊಸ್ತಿಲಿಗೆ ಬಂದು ನಿಂತಿದ್ದರು. ಆದರೆ, ಅಂತಿಮ ನಾಲ್ಕು ಸೆಟ್‌ಗಳಲ್ಲಿ ದಿಡೀರನೆ ಲಯ ಕಳೆದುಕೊಂಡ ಕಮಲ್, ಅಚ್ಚರಿಯ ರೀತಿಯಲ್ಲಿ ಸೋಲನುಭವಸಿದರು.