ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು (ಸಂಗ್ರಹ ಚಿತ್ರ) 
ಕ್ರೀಡೆ

ಪಿವಿ ಸಿಂಧು ಮುಡಿಗೆ 'ಮಕಾವ್ ಗ್ರಾಂಡ್ ಪ್ರಿಕ್ಸ್ ಗೋಲ್ಡ್ ಸಿರೀಸ್‌'

ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮುಡಿಗೆ ಮತ್ತೊಂದು ಗರಿ ಸೇರಿದ್ದು, ಮಕಾವ್ ಗ್ರಾಂಡ್ ಪ್ರಿಕ್ಸ್ ಗೋಲ್ಡ್ ಬ್ಯಾಡ್ಮಿಂಟನ್ ಸಿರೀಸ್ ಅನ್ನು ಗೆದ್ದುಕೊಂಡಿದ್ದಾರೆ.

ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮುಡಿಗೆ ಮತ್ತೊಂದು ಗರಿ ಸೇರಿದ್ದು, ಮಕಾವ್ ಗ್ರಾಂಡ್ ಪ್ರಿಕ್ಸ್ ಗೋಲ್ಡ್ ಬ್ಯಾಡ್ಮಿಂಟನ್ ಸಿರೀಸ್ ಅನ್ನು ಗೆದ್ದುಕೊಂಡಿದ್ದಾರೆ.

ಮಕಾವ್‌ನಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಪಿವಿ ಸಿಂಧು ದಕ್ಷಿಣ ಕೋರಿಯಾದ ಕಿಮ್ ಹ್ಯೋ ಮಿನ್ ವಿರುದ್ಧ 21-12 21-17 ನೇರ ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಸುಮಾರು 45 ನಿಮಿಷ ನಡೆದ ಈ ಪಂದ್ಯದಲ್ಲಿ 11ನೇ ಶ್ರೇಯಾಂಕಿತ ಆಟಗಾರ್ತಿ ಸಿಂಧು 91ನೇ ಶ್ರೇಯಾಂಕಿತ ಆಟಗಾರ್ತಿ ಕಿಮ್ ಹ್ಯೋ ಮಿನ್‌ರನ್ನು ಸುಲಭವಾಗಿ ಮಣಿಸಿದರು.

ಪಂದ್ಯದ ಆರಂಭದಲ್ಲಿ ಕಿಮ್ ಹ್ಯೋ ಮಿನ್ ಕೊಂಚ ಆಕ್ರಮಣಕಾರಿ ಆಟಕ್ಕೆ ಮೊರೆ ಹೊದರಾದರೂ ಹಿನ್ನಡೆ ಅನುಭವಿಸಿದರು. ಆದರೆ ನಿಧಾನಗತಿಯಲ್ಲಿ ಆಟವನ್ನು ಆರಂಭಿಸಿದ ಸಿಂಧು ಸಮಯ ಕಳೆದಂತೆ ತಮ್ಮ ಬಲವಾದ ರಿವರ್ಸ್‌ನಿಂದಾಗಿ ಆಟದ ಮೇಲೆ ಹಿಡಿತ ಸಾಧಿಸಿದರು. ಅಂತಿಮವಾಗಿ ಸಿಂಧು 21-12 21-17 ನೇರ ಸೆಟ್‌ಗಳ ಅಂತರದಿಂದ ಅಮೋಘ ಜಯ ಸಾಧಿಸಿದರು. ಸಿಂಧು ಪಾಲಿಗೆ ಇದು ಪ್ರಸಕ್ತ ಋತುವಿನ ಮೊದಲ ಪ್ರಶಸ್ತಿಯಾಗಿದ್ದು, ಪ್ರಶಸ್ತಿಯು 1, 20,000 ಯುಎಸ್ ಡಾಲರ್ ಮೊತ್ತವನ್ನು ಒಳಗೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

SCROLL FOR NEXT