ಏಷ್ಯನ್ ಗೇಮ್ಸ್: ರಿಲೆ ಓಟದಲ್ಲಿ ಚಿನ್ನ ಗೆದ್ದ ಭಾರತ ಮಹಿಳಾ ತಂಡ
ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಗೇಮ್ಸ್ನ...
ಇಂಚಾನ್: ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಗೇಮ್ಸ್ನ ರಿಲೆ ಓಟದಲ್ಲಿ ಭಾರತ ಮಹಿಳಾ ತಂಡ ಚಿನ್ನದ ನಗೆ ಬೀರಿದೆ.
ಇಂದು ನಡೆದ 4x400 ಮೀಟರ್ ರಿಲೆ ಓಟದಲ್ಲಿ ಭಾರತದ ಮಹಿಳಾ ಕ್ರೀಡಾಪಟುಗಳಾದ ಕರ್ನಾಟಕದ ಪೂವಮ್ಮ, ಪ್ರಿಯಾಂಕ ಪವಾರ್, ಟಿಂಟು ಲುಕಾ ಮತ್ತು ಮಂದೀಪ್ ಕೌರ್ ಅವರು ವಿಜಯದ ಓಟ ಓಡುವ ಮೂಲಕ ಚಿನ್ನ ಗೆದ್ದಿದ್ದಾರೆ. ಈ ಮೂಲಕ ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಒಟ್ಟು 9 ಚಿನ್ನದ ಪದಕ ಒಲಿದು ಬಂದಿದೆ.