ಏಷ್ಯನ್ ಗೇಮ್ಸ್: ಪಾಕ್ ವಿರುದ್ಧ ಗೆದ್ದ ಭಾರತ ಹಾಕಿ ತಂಡಕ್ಕೆ ಚಿನ್ನ
17ನೇ ಏಷ್ಯನ್ ಕ್ರೀಡಾಕೂಟದ ಹಾಕಿ ವಿಭಾಗದಲ್ಲಿ ಪಾಕಿಸ್ತಾನದ ತಂಡದ ವಿರುದ್ಧ ಭಾರತ ತಂಡ ಜಯಭೇರಿ ಸಾಧಿಸಿದೆ.
ಇಂಚಾನ್: 17ನೇ ಏಷ್ಯನ್ ಕ್ರೀಡಾಕೂಟದ ಹಾಕಿ ಫೈನಲ್ ನಲ್ಲಿ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಗೆಲುವು ಸಾಧಿಸಿದೆ.
ದಕ್ಷಿಣ ಕೊರಿಯಾದ ಇಂಚಾನ್‌ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದ ಹಾಕಿ ಫೈನಲ್ ನಲ್ಲಿ ಉಭಯ ತಂಡಗಳು ತಲಾ ಒಂದು ಗೋಲು ದಾಖಲಿಸಿ ಸಮಬಲ ಸಾಧಿಸಿದ್ದವು. ಹೀಗಾಗಿ ಎರಡು ತಂಡಗಳಿಗೆ ಪೆನಾಲ್ಟಿ ಶೂಟೌಟ್ ನೀಡಲಾಯಿತು. ಪಾಕ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಅಂತರದಲ್ಲಿ ಭಾರತ ಗೆಲವು ಸಾಧಿಸಿದೆ.
16 ವರ್ಷಗಳ ಬಳಿಕ ಭಾರತ ತಂಡ ಹಾಕಿ ಕ್ರೀಡೆಯಲ್ಲಿ ಗೆಲವು ಸಾಧಿಸಿದ್ದು, 2016ರ ಒಲಂಪಿಕ್ಸ್ ಗೆ ಭಾರತ ತಂಡ ಅರ್ಹತೆ ಪಡೆದಿದೆ.
1998 ನಂತರ ಭಾರತಕ್ಕೆ ಹಾಕಿ ಪಂದ್ಯದಲ್ಲಿ ಚಿನ್ನದ ಪದಕ ಒಲಿದು ಬಂದಿದ್ದು, ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ ಗೆಲವು ಸಾಧಿಸುವುದರ ಮೂಲಕ ವಿಜಯದ ನಗೆ ಬೀರಿದೆ.