ಬೆಳ್ಳಿ ಬಾಚಿದ ಟಿಂಟು ಲೂಕಾ
ಓಟದ ಬಹುತೇಕ ಹಂತದಲ್ಲಿ ಮುನ್ನಡೆ ಸಾಧಿಸಿದ್ದರೂ ಅಂತಿಮ ಕ್ಷಣದಲ್ಲಿ ಹಿನ್ನಡೆ...
ಓಟದ ಬಹುತೇಕ ಹಂತದಲ್ಲಿ ಮುನ್ನಡೆ ಸಾಧಿಸಿದ್ದರೂ ಅಂತಿಮ ಕ್ಷಣದಲ್ಲಿ ಹಿನ್ನಡೆ ಅನುಭವಿಸಿದ ಭಾರತದ ಓಟಗಾರ್ತಿ ಟಿಂಟು ಲುಕಾ, ಏಷ್ಯನ್ ಕ್ರೀಡಾಕೂಟದ ಮಹಿಳೆಯಕ 800 ಮೀಟರ್ ಓಟದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ.
ಬುಧವಾರ ನಡೆದ ಅಂತಿಮ ಸುತ್ತಿನ ಓಟದಲ್ಲಿ ಕಜಕಿಸ್ತಾನದ ಮಾರ್ಗರಿಟಾ ಮುಕಶೆವಾ, ಅಂತಿಮ ಹಂತದಲ್ಲಿ ಟಿಂಟು ಲುಕಾ ಅವರನ್ನು ಹಿಂದಿಕ್ಕುವ ಮೂಲಕ ಚಿನ್ನದ ಪದಕ ಪಡೆದರು. ಟಿಂಟು ಲುಕಾ 1:59:19 ನಿಮಿಷದಲ್ಲಿ ಗುರಿ ತಲುಪಿದರೆ, ಮಾರ್ಗರಿಟಾ 1:59:02 ನಿಮಿಷದಲ್ಲಿ ಗುರಿ ತಲುಪಿದರು. ಇನ್ನು ಚೀನಾದ ಜಾವ್ ಜಿಂಗ್ 1:59:48 ನಿಮಿಷದಲ್ಲಿ ಗುರಿ ತಲುಪಿ ಕಂಚಿನ ಪದಕ ಪಡೆದರು. ಈ ಮೂಲಕ ಟಿಂಟು ಕೂದಲೆಳೆಯ ಅಂತರದಲ್ಲಿ ಚಿನ್ನದ ಪದಕ ವಂಚಿತರಾದರು.