ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ದೇಶೀಯ ಕ್ರಿಕೆಟ್‌ನತ್ತ ಗಂಭೀರ ಚಿತ್ತ

ಭಾರತ ಟೆಸ್ಟ್ ತಂಡದಲ್ಲಿ ಮತ್ತೆ ಸ್ಥಾನ ಹೊಂದುವ ನಿಟ್ಟಿನಲ್ಲಿ ಎಡಗೈ...

Lingaraj Badiger
Updated On : 7 Oct 2014, 12:21 pm

ನವದೆಹಲಿ: ಭಾರತ ಟೆಸ್ಟ್ ತಂಡದಲ್ಲಿ ಮತ್ತೆ ಸ್ಥಾನ ಹೊಂದುವ ನಿಟ್ಟಿನಲ್ಲಿ ಎಡಗೈ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್, ಮುಂಬರುವ ದೇಶೀಯ ಋತುವನ್ನು ಇದಕ್ಕಾಗಿ ವೇದಿಕೆಯನ್ನಾಗಿ ಬಳಸಿಕೊಳ್ಳುವ ಉದ್ದೇಶ ಹೊಂದಿದ್ದಾರೆ.

ಸುಮಾರು ಎರಡೂವರೆ ವರ್ಷಗಳ ನಂತರ ಕಳೆದ ಇಂಗ್ಲೆಂಡ್ ಪ್ರವಾಸಕ್ಕಾಗಿ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಿದ್ದ ಗಂಭೀರ್, ಕೊನೆಯ ಎರಡು ಪಂದ್ಯಗಳಲ್ಲಿ ಉತ್ತಮವಾಗಿ ಆಡಿರಲಿಲ್ಲ ಅವರು ಕ್ರಮವಾಗಿ 0, 3, 4 ಮತ್ತು 18 ರನ್‌ಗಳಿಸಲಷ್ಟೇ ಶಕ್ತರಾಗಿದ್ದರು. ಒಮ್ಮೆ ತಂಡದಿಂದ ಹೊರಗುಳಿದರೆ ಮತ್ತೆ ವಾಪಸಾಗುವುದು ಅಷ್ಟು ಸುಲಭವಲ್ಲ. ಆದರೆ, ಒಮ್ಮೆ ತಾನಾಗಿಯೇ ಬರುತ್ತದೆ ಎಂದು ಗಂಭೀರ್ ಪ್ರತಿಕ್ರಿಯಿಸಿದ್ದಾರೆ.

ಉತ್ತಮವಾಗಿ ಆಡದಿದ್ದಾಗ ಟೀಕೆಗಳು ಬರುವುದು ಸಹಜ. ಹಾಗೆಯೇ, ಉತ್ತಮ ಪ್ರದರ್ಶನ ನೀಡುತ್ತಿದ್ದಾಗ ಪ್ರಶಂಸೆಗಳೂ ಬರುತ್ತವೆ. ಹಾಗಾಗಿ, ಟೀಕೆಗಳನ್ನೂ ಸಹ ನಾವು ಸ್ವೀಕರಿಸಬೇಕಾಗುತ್ತದೆ. ಇವು ನನ್ನಲ್ಲಿ ಆತ್ಮವಿಶ್ವಾಸವನ್ನೇ ತುಂಬುತ್ತವೆ ಎಂದು ಹೇಳಿದ್ದಾರೆ.
ಮುಂದೆ ಮಹತ್ವದ ದೇಶೀಯ ಕ್ರಿಕೆಟ್ ಋತುವು ಇದ್ದು, ಉತ್ತಮ ಬ್ಯಾಟಿಂಗ್ ಲಯಕ್ಕೆ ಹೆಚ್ಚು ರನ್ ಹರಿಸುವುದು ಅಗತ್ಯವಿದೆ. ಮುಖ್ಯವಾಗಿ ಮಾನಸಿಕವಾಗಿಯೂ ಹೆಚ್ಚು ಗಟ್ಟಿಗೊಳ್ಳಬೇಕಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement