ಕೊನೆಗೂ ಸಾನಿಯಾಗೆ ಸಿಕ್ಕ ತಾಜ್ ದರ್ಶನ
ಆಗ್ರಾ: ಭಾರತದ ಟೆನಿಸ್ ತಾರೆ, ಸಾನಿಮಾ ಮಿರ್ಚಾಗೆ ಆಗ್ರಾದಲ್ಲಿರುವ ಇತಿಹಾಸ ಪ್ರಸಿದ್ಧ ತಾಜ್ ಮಹಲ್ ನೋಡುವ ಭಾಗ್ಯ ಸಿಗದೇ ನಿರಾಸೆಯಿಂದ ವಾಪಸಾದ ಪ್ರಸಂಗವೊಂದು ನಡೆದಿದೆ.
17ನೇ ಶತಮಾನದ ತಾಜ್ ಮಹಲ್ ಸ್ಮಾರಕ ವೀಕ್ಷಣೆಗೆ ಸಾನಿಯಾ ಮಿರ್ಜಾ ಮಂಗಳವಾರ ಸಂಜೆ ತಡವಾಗಿ ಆಗಮಿಸಿದ್ದ ಹಿನ್ನೆಲೆಯಲ್ಲಿ ಅದಾಗಲೇ ಬಾಗಿಲು ಮುಚ್ಚಿದ್ದರಿಂದ ಅದನ್ನು ನೋಡುವ ಆಸೆ ಈಡೇರಲಿಲ್ಲ. ಆದರೆ ಮರು ದಿವಸ ಅಂದರೆ ಬುಧವಾರ ಮತ್ತೆ ತಾಜ್ ಮಹಲ್ ನೋಡಲು ತೆರಳಿದ ಸಾನಿಯಾ, ಈ ಬಾರಿ ಸ್ಮಾರಕವನ್ನು ಕಣ್ತುಂಬಿಕೊಂಡರು.
ಇದಕ್ಕೂ ಮುನ್ನ ಮಂಗಳವಾರ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ತಾಜ್ ಮಹಲ್ ವೀಕ್ಷಿಸಿ ಹಿಂತಿರುಗಿದ್ದರು. ಆದರೆ, ಸಾನಿಯಾ ಬರುವಷ್ಟರಲ್ಲಿ ಮುಖ್ಯದ್ವಾರದ ಬಾಗಿಲನ್ನು ಬಂದ್ ಮಾಡಲಾಗಿತ್ತು ಎಂದು ಪ್ರವಾಸಿ ಮಾರ್ಗದರ್ಶಿ ವೇದ್ ಗೌತಮ್ ಹೇಳಿದ್ದಾರೆ.
ಕುಂಬ್ಳೆ ಮತ್ತು ಸಾನಿಯಾ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದರು.