ಇಂದಿನಿಂದ ಬೆಂಗಳೂರು ಕಪ್ ಹಾಕಿ
ದೇಶದ ಅಗ್ರಮಾನ್ಯ ತಂಡಗಳು ಶುಕ್ರವಾರದಿಂದ 17ರ ವರೆಗೆ ನಡೆಯಲಿರುವ ಬೆಂಗಳೂರು ಕಪ್ ...
ಬೆಂಗಳೂರು: ದೇಶದ ಅಗ್ರಮಾನ್ಯ ತಂಡಗಳು ಶುಕ್ರವಾರದಿಂದ 17ರ ವರೆಗೆ ನಡೆಯಲಿರುವ ಬೆಂಗಳೂರು ಕಪ್ ಅಖಿಲ ಭಾರತ ಆಹ್ವಾನಿತ ಹಾಕಿ ಟೂರ್ನಿಯಲ್ಲಿ ಭಾಗವಹಿಸುವಿಕೆಯನ್ನು ಖಚಿತ ಪಡಿಸಿವೆ. ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ನಡೆಯಲಿರುವ ಈ ಪಂದ್ಯಾವಳಿಯನ್ನು ಹಾಕಿ ಕರ್ನಾಟಕ ಆಯೋಜಿಸಿದೆ.
ಒಂದು ವಾರ ಕಾಲ ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದ್ದು, ಪುರುಷರ ವಿಭಾಗದಲ್ಲಿ ಐದು ತಂಡಗಳಿವೆ.
ಏರ್ ಇಂಡಿಯಾ, ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ, ಆರ್ಮಿ ಇಲೆವೆನ್ ಮತ್ತು ಕರ್ನಾಟಕ ಇಲೆವೆನ್ ಟೂರ್ನಿಯಲ್ಲಿ ಭಾಗವಹಿಸಲಿರುವ ಪ್ರಮುಖ ತಂಡಗಳಾಗವೆ. ಇನ್ನು ಮಹಿಳೆಯರ ವಿಭಾಗದಲ್ಲಿ ಆರು ತಂಡಗಳಿದ್ದು, ಹರ್ಯಾಣ, ತಮಿಳುನಾಡು, ವೆಸ್ಟರ್ನ್ ರೈಲ್ವೆ, ಸೆಂಟ್ರಲ್ ರೈಲ್ವೆ, ಮಧ್ಯಪ್ರದೇಶ ಅಕಾಡೆಮಿ ಮತ್ತು ಕರ್ನಾಟಕ ಇಲೆವೆನ್ ಪ್ರಮುಖವಾಗಿವೆ.
ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆಯಲಿರುವ ಎರಡು ತಂಡಗಳು ಫೈನಲ್ನಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಲಿವೆ ಎಂದು ಹಾಕಿ ಕರ್ನಾಟಕ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.
----------------------