'ಫಾರ್ಮ್ನಲ್ಲಿ ಇಲ್ಲದ ವಿರಾಟ್ ಕೊಹ್ಲಿ 5ನೇ ಕ್ರಮಾಂಕದಲ್ಲಿ ಆಡುವುದು ಸೂಕ್ತ'
ಭಾರತದ ಪ್ರಮುಖ ಬ್ಯಾಟ್ಲ್ಮನ್ ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡಿರುವುದು ...
ಮುಂಬೈ; ಭಾರತದ ಪ್ರಮುಖ ಬ್ಯಾಟ್ಲ್ಮನ್ ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡಿರುವುದು ಆತಂಕ ಮೂಡಿಸಿದೆ.
5ನೇ ಕ್ರಮಾಂಕದಲ್ಲಿ ಆಡುವುದು ವಿರಾಟ್ಗೆ ಮತ್ತೊಂದು ಅವಕಾಶವಾಗಿದೆ ಎಂದು ಮಾಜಿ ನಾಯಕ ಸುನಿಲ್ ಗಾವಸ್ಕರ್ ಗುರುವಾರ ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ, ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ 124 ರನ್ಗಳ ಭಾರೀ ಅಂತರದಿಂದ ಸೋಲನುಭವಿಸಿದ್ದ ಪಂದ್ಯದಲ್ಲಿ ಭಾರತ ತಂಡದ ಬ್ಯಾಟ್ಸ್ಮನ್ಗಳು ವಿಕೆಟ್ ಒಪ್ಪಿಸಿದ ರೀತಿ ಬೇಸರ ಉಂಟುಮಾಡುವಂತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ, ವಿರಾಟ್ ಕೊಹ್ಲಿ ಅವರು ಕೆಳ ಕ್ರಮಾಂಕದಲ್ಲಿ ಆಡಬೇಕು ಎಂದು ಸುನಿಲ್ ಗಾವಸ್ಕರ್ ಸಲಹೆ ನೀಡಿದ್ದಾರೆ. 'ಶತಕಗಳಿಸುವ ಬ್ಯಾಟ್ಸ್ಮನ್ 10, 20 ರನ್ಗಳಿಸಲು ಆಗುತ್ತಿಲ್ಲವೆಂದರೆ, ಇದು ಕಳವಳದ ವಿಷಯ. ನನ್ನ ಪ್ರಕಾರ ಕೊಹ್ಲಿ ಹಲವಾರು ತಾಂತ್ರಿಕ ವಿಚಾರಗಳಲ್ಲಿ ಚೇತರಿಗೆ ಕಾಣಬೇಕಿದೆ. ಭಾರತ ತಂಡದ ಆಡಳಿತ ಮಂಡಳಿ ಕೊಹ್ಲಿಗೆ 4ನೇ ಅಥವಾ 5ನೇ ಕ್ರಮಾಂದಲ್ಲಿ ಆಡಲು ಅವಕಾಶ ನೀಡಬೇಕು. ಇತ್ತೀಚೆಗೆ ಕೊಹ್ಲಿ ಆಟವನ್ನು ಗಮನಿಸಿದಾಗ, ಹೊಸ ಚೆಂಡನ್ನು ಎದುರಿಸಲು ಆತನಿಗೆ ಆಗುತ್ತಿಲ್ಲ. ಹೀಗಾಗಿ, 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ಕೊಹ್ಲಿಗೆ ನೆರವಾಗಬಹುದು. ಅಲ್ಲದೆ, ರನ್ಗಳಿಸಲು ಅನುಕೂಲವಾಗಬಹುದು' ಎಂದರು.
'ಬ್ಯಾಟಿಂಗ್ಗೆ ಅನುಕೂಲಕರವಾಗಿದ್ದ ಪಿಚ್ನಲ್ಲಿ ಭಾರತ ತಂಡ ಕಳಪೆ ಪ್ರದರ್ಶನ ತೋರಿತು. ಹೀಗಾಗಿ ವೆಸ್ಟ್ಇಂಡೀಸ್ ವಿರುದ್ಧ ಕೊಚ್ಚಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ 321ರನ್ ಗಳಿಸಿದಿದ್ದರೂ, ಭಾರತ ಈ ಪಿಚ್ನಲ್ಲಿ ಕನಿಷ್ಠ 300 ರನ್ಗಳನ್ನುದರೂ ಗಳಿಸಬೇಕಿತ್ತು. ಕೆಲ ಬ್ಯಾಟ್ಸ್ಮನ್ಗಳು ವಿಕೆಟ್ ಒಪ್ಪಿಸಿದ ರೀತಿ ಇಂತಹ ಹೀನಾಯ ಸೋಲಿನ ಪ್ರಮುಖ ಕಾರಣವಾಗಿತ್ತು. ಹೀಗಾಗಿ ಸರಣಿಯಲ್ಲಿ 5-0 ಅಂತರದಿಂದ ಗೆಲ್ಲುವ ಅವಕಾಳವನ್ನು ನಾವು ಕೈಚೆಲ್ಲಿದೆವು' ಎಂದು ಗಾವಸ್ಕರ್ ತಿಳಿಸಿದರು.
--------------------