ಪುಣೆ ಎಫ್ಸಿ ಗೆದ್ದಾಗ ಕುಣಿಯುತ್ತೇನೆ: ಹೃತಿಕ್
ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ...
ಮುಂಬೈ: ಇಂಡಿಯನ್ ಸೂಪರ್ ಲೀಗ್(ಐಎಸ್ಎಲ್) ಟೂರ್ನಿಯಲ್ಲಿ ಪುಣೆ ತಂಡ ಗೆದ್ದಾಗಲೆಲ್ಲಾ, ಮೈದಾನಕ್ಕಿಳಿದು ಕುಣಿಯುತ್ತೇನೆ ಎಂದು ತಂಡದ ಸಹ ಮಾಲೀಕ ಹಾಗೂ ಬಾಲಿವುಡ್ ನಟ ಹೃತಿಕ್ ರೋಷನ್ ತಿಳಿಸಿದ್ದಾರೆ.
ತಂಡದಲ್ಲಿ ಪಾಲುದಾರಿಕೆ ಪಡೆದ ನಂತರ ಮಾತನಾಡಿರುವ ಹೃತಿಕ್, ಐಎಸ್ಎಲ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದು, ತಂಡ ಪಂದ್ಯ ಗೆದ್ದಾಗ ಮೈದನಾಕ್ಕಿಳಿದು ಕುಣಿಯುವ ಮೂಲಕ ಸಂಭ್ರಮಿಸುವೆ ಎಂದು ತಿಳಿಸಿದ್ದಾರೆ. ಈ ಮೂಲಕ ಹೃತಿಕ್ ರೋಷನ್, ಮೊದಲ ಬಾರಿಗೆ ಕ್ರೀಡೆಯಲ್ಲಿ ಕೈಜೋಡಿಸಿದ್ದಾರೆ.
ಸಲ್ಮಾನ್ ಅನುಪಸ್ಥಿತಿ ಕುರಿತು ಮಾತನಾಡಿದ ತಂಡ ಸಿಇಒ ಗೌರವ್ ಮೊಡ್ವೆಲ್, ಸಲ್ಮಾನ್ ಖಾನ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣದ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂಬ ವರದಿಯನ್ನು ತಳ್ಳಿ ಹಾಕಿದರು. ಐಎಸ್ಎಲ್ ಇದೇ ಭಾನುವಾರ ಆರಂಭವಾಗಲಿದ್ದು, ಡಿಸೆಂಬರ್ 20ರವರೆಗೆ ನಡೆಯಲಿದೆ. ಐಪಿಎಲ್ ಮಾದರಿಯಲ್ಲೇ ಪಂದ್ಯಾವಳಿ ಜರುಗಲಿದೆ.