ಮೂರನೇ ಏಕದಿನ ಪಂದ್ಯ ರದ್ದು
ಹುಡ್ಹುಡ್ ಚಂಡ ಮಾರುತ ಆಂಧ್ರಪ್ರದೇಶಕ್ಕೆ ಅಪ್ಪಳಿಸಿರುವ ಹಿನ್ನೆಲೆಯಲ್ಲಿ ಭಾರತ...
ವಿಶಾಖಪಟ್ಟಣ: ಹುಡ್ಹುಡ್ ಚಂಡ ಮಾರುತ ಆಂಧ್ರಪ್ರದೇಶಕ್ಕೆ ಅಪ್ಪಳಿಸಿರುವ ಹಿನ್ನೆಲೆಯಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ 3ನೇ ಏಕದಿನ ಪಂದ್ಯವನ್ನು ರದ್ದುಗೊಳಿಸಲಾಗಿದೆ.
ಅಕ್ಟೋಬರ್ 14 ರಂದು ಇಲ್ಲಿನ ವೈ.ಎಸ್.ಆರ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯ ಚಂಡಮಾರುತದಿಂದ ರದ್ದಾಗಿದೆ.
ಹವಾಮಾನ ಸುಧಾರಿಸಿದರೆ, ಪಂದ್ಯ ನಡೆಸಲು ಆಂಧ್ರ ಪ್ರದೇಶ ಕ್ರಿಕೆಟ್ ಸಂಸ್ಥೆ ಸಿದ್ಧವಾಗಿತ್ತಾದರೂ, ಬಿಸಿಸಿಐ ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿಲ್ಲ. ಹಾಗಾಗಿ ಪಂದ್ಯವನ್ನು ರದ್ದುಗೊಳಿಸಲಾಗಿದೆ ಎಂದು ಬಿಸಿಸಿಐ ಜಂಟಿ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ.