ರೋಜರ್ ಫೆಡರರ್‌ಗೆ ಶಾಂಘೈ ಮಾಸ್ಟರ್ಸ್ ಗರಿ
ವಿಶ್ವದ ಮಾಜಿ ನಂಬರ್ ಒನ್ ಆಟಗಾರ ರೋಜರ್ ಫೆಡರರ್ ಉತ್ತಮ ಪ್ರದರ್ಶ ನೀಡುವ ಮೂಲಕ ಶಾಂಘೈ ಮಾಸ್ಟರ್ಸ್...
ಶಾಂಘೈ: ವಿಶ್ವದ ಮಾಜಿ ನಂಬರ್ ಒನ್ ಆಟಗಾರ ರೋಜರ್ ಫೆಡರರ್ ಉತ್ತಮ ಪ್ರದರ್ಶ ನೀಡುವ ಮೂಲಕ ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ. ಈ ಮೂಲಕ ಪ್ರಸಕ್ತ ಸಾಲಿನಲ್ಲಿ ನಾಲ್ಕನೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಸ್ವಿಜರ್ಲೆಂಡ್ ಆಟಗಾರ ಫೆಡರರ್, ತಮ್ಮ ಎದುರಾಳಿ ಫ್ರಾನ್ಸ್ ಆಟಗಾರ ಗಿಲ್ಸ್ ಸಿಮೊನ್ ವಿರುದ್ಧ 7-6 (6) , 7-6 (2) ನೇರ ಸೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸಿದರು.
ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಲಿಯೊನಾರ್ಡೋ ಮೇಯರ್ ವಿರುದ್ಧ ಗೆಲುವು ದಾಖಲಿಸಲು ಹರ ಸಾಹಸ ಪಟ್ಟಿದ್ದ ರೋಜರ್ ಫೆಡರರ್ ಉತ್ತಮ ಆರಂಭ ಪಡೆಯಲು ವಿಫಲರಾಗಿದ್ದರು. ನಂತರ ಕ್ರಮೇಣ ತಮ್ಮ ಲಯ ಕಳೆದುಕೊಂಡ ಫೆಡರರ್ , ಉಪಾಂತ್ಯದ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಆಟಗಾರ ನೊವಾಕ್ ಜೊಕೋವಿಚ್ ವಿರುದ್ಧ ಉತ್ತಮ ಗೆಲುವು ದಾಖಲಿಸಿದ್ದರು.
ಆರಂಭದಿಂದಲೇ ಎದುರಾಳಿ ವಿರುದ್ದ ನಿಯಂತ್ರಣ ಸಾಧಿಸಿದ ಫೆಡರರ್ ಪಂದ್ಯದಲ್ಲಿ ನೇರ ಸೆಟ್‌ಗಳ ಗೆಲವು ದಾಖಲಿಸಿದರು. ಸಿಮೊನ್ ಫೆಡರರ್‌ಗೆ ಪ್ರತಿರೋಧ ನೀಡಿದರಾದರೂ, ಅನುಭವದ ಮುಂದೆ ತಲೆ ತಗ್ಗಿಸಬೇಕಾಯಿತು.