ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಟೀಂ ಇಂಡಿಯಾ ಕೈ ತಪ್ಪಿದ ಅಗ್ರ ಸ್ಥಾನ

Lingaraj Badiger
Updated On : 14 Oct 2014, 12:33 pm

ದುಬೈ: ಒಂದೆಡೆ ಹುಡ್ ಹುಡ್ ಚಂಡಮಾರುತದಿಂದ ವಿಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯ ರದ್ದಾಗಿದ್ದು, ಮತ್ತೊಂದೆಡೆ ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯನ್ನು ಗೆದ್ದುಕೊಂಡ ಹಿನ್ನೆಲೆಯಲ್ಲಿ, ಭಾರತ ತಂಡ ಐಸಿಸಿ ಏಕದಿನ ಕ್ರಿಕೆಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಕಳೆದುಕೊಂಡಿದೆ.

ಕಳೆದ ಆಗಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡ ಜಿಂಬಾಬ್ವೆ ವಿರುದ್ಧ ಏಕದಿನ ಪಂದ್ಯದಲ್ಲಿ ಸೋಲು ಅನುಭವಿಸಿದ ನಂತರ ಅಗ್ರಸ್ಥಾನ ಕಳೆದುಕೊಂಡಿದ್ದ ಆಸ್ಟ್ರೇಲಿಯಾ, ಪಾಕಿಸ್ತಾನ ವಿರುದ್ಧ ಭಾನುವಾರ ರೋಚಕ ಸರಣಿ ಕ್ಲೀನ್ ಸ್ಪೀಪ್ ಗೆಲವು ದಾಖಲಿಸುವುದರೊಂದಿಗೆ ಮತ್ತೆ ನಂಬರ್ ಒನ್ ಸ್ಥಾನ ಪಡೆದಿದೆ. ಈ ಮೂಲಕ ಭಾರತ ತಂಡ ಜಂಟಿ ಎಡರನೇ ಸ್ಥಾನಕ್ಕೆ ಬಂದಿದೆ. ಧೋನಿ ಪಡೆ ಉಳಿದಿರುವ ಎರಡೂ ಪಂದ್ಯಗಳಲ್ಲಿ ಗೆಲವು ದಾಖಲಿಸಿದರೂ ಭಾರತ ತಂಡ ಅಗ್ರ ಸ್ಥಾನಕ್ಕೆ ಬರುವ ಅವಕಾಶಗಳಿಲ್ಲ.

ಮೂರನೇ ಏಕದಿನ ಪಂದ್ಯ ರದ್ದಾಗಿದ್ದರಿಂದ ಭಾರತ ಇನ್ನುಳಿದ ಎರಡು ಪಂದ್ಯಗಳಲ್ಲಿ ಮಾತ್ರ ಆಡಲಿದೆ. ಟೀಂ ಇಂಡಿಯಾ ಎರಡೂ ಪಂದ್ಯ ಗೆದ್ದರೂ ಸಹ ಆಸ್ಚ್ರೇಲಿಯಾಗಿಂತ 0.02 ರೇಟಿಂಗ್ ಪಾಯಿಂಟ್ ಕಡಿಮೆ ಪಡೆಯಲಿರುವ ಹಿನ್ನೆಲೆಯಲ್ಲಿ ಭಾರತ ಎರಡನೇ ಸ್ಥಾನದಲ್ಲೇ ಉಳಿಯಬೇಕಾಗುತ್ತದೆ.

ಭಾರತ, ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ದಯನೀಯ ಸೋಲು ಅನುಭವಿಸಿತ್ತು. ಹಾಗಾಗಿ ತಂಡ ಹಿನ್ನೆಡೆ ಅನುಭವಿಸಲು ಕಾರಣವಾಗಿದೆ. ಪ್ರಸ್ತುತ ರ್ಯಾಂಕಿಂಗ್ ಪಟ್ಟಿಯಲ್ಲಿ ಆಸೀಸ್ ಪಡೆ 114 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಭಾರತ ಹಾಗೂ ದಕ್ಷಿಣ ಆಫ್ರಿಕಾ 113 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಪೈಪೋಟಿ ನಡೆಸಿವೆ. ಒಂದು ವೇಳೆ ಭಾರತ ಉಳಿದಿರುವ ಎರಡು ಪಂದ್ಯಗಳಲ್ಲಿ ಸೋತರೆ, ಮತ್ತೊಂದು ಸ್ಥಾನ ಕುಸಿಯುವ ಸಾಧ್ಯತೆಗಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement