ಹಾಕಿ ಇಂಡಿಯಾ ಅಧ್ಯಕ್ಷರಾಗಿ ಬಾತ್ರ ನೇಮಕ
ನರೇಂದ್ರ ಬಾತ್ರಾ ಹಾಕಿ ಇಂಡಿಯಾ...
ನವದೆಹಲಿ: ನರೇಂದ್ರ ಬಾತ್ರಾ ಹಾಕಿ ಇಂಡಿಯಾ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಬಾತ್ರಾ ಈ ಮೊದಲು ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ನಾಲ್ಕು ವರ್ಷಗಳ ಅವಧಿಗೆ ಸಂಸ್ಥೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಸೋಮವಾರ ನಡೆದ ಚುನಾವಣೆಯಲ್ಲಿ ಮುಸ್ತಾಖ್ ಅಹ್ಮದ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ಇನ್ನು ಜಮ್ಮು ಕಾಶ್ಮೀರದ ರಾಜಿಂದರ್ ಸಿಂಗ್ ಸಂಸ್ಥೆಯ ಖಜಾಂಚಿಯಾಗಿ ಅವಿರೋಧವಾಗಿ ಆಯ್ಕೆಯಾದರು. ನಿರ್ಗಮಿಸಿದ ಅಧ್ಯಕ್ಷ ಮರಿಯಮ್ಮಾ ಕೋಶಿ ಹಿರಿಯ ಉಪಾಧ್ಯಕ್ಷರಾಗಿ ನೇಮಕಗೊಂಡರು. ನಿರ್ವಚನ ಅಧಿಕಾರಿ ನ್ಯಾಯಮೂರ್ತಿ ಅರುಣ್ ಸುರೇಶ್, ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧಿಕ್ಷಕ ವಿ.ಕುಲ್ದೀಪ್ ಅವರ ಉಪಸ್ಥಿತಿಯಲ್ಲಿ ಚುನಾವಣೆ ನಡೆಯಿತು.