ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಲಿಯಾಂಡರ್ ಪೇಸ್‌ಗೆ ಜೀವ ಬೆದರಿಕೆ?

ಕ್ರಿಕೆಟರ್ ಅತುಲ್ ಶರ್ಮಾ ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಖ್ಯಾತ ಟೆನಿಸ್ ತಾರೆ ಲಿಯಾಂಡರ್ ಪೇಸ್...

Rashmi Kasaragodu
Updated On : 18 Oct 2014, 1:48 am

ಮುಂಬೈ: ಕ್ರಿಕೆಟರ್ ಅತುಲ್ ಶರ್ಮಾ ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಖ್ಯಾತ ಟೆನಿಸ್ ತಾರೆ ಲಿಯಾಂಡರ್ ಪೇಸ್ ಅವರು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನ್ಯಾಯಾಲಯದ ಆವರಣದಲ್ಲಿ ನನ್ನನ್ನು ಮತ್ತು ನನ್ನ ಪುತ್ರಿಯನ್ನು ಕೊಲ್ಲುವುದಾಗಿ ಶರ್ಮಾ ಬೆದರಿಕೆ ಹಾಕಿರುವುದಾಗಿ ಪೇಸ್ ದೂರಿನಲ್ಲಿ ತಿಳಿಸಿದ್ದಾರೆ. ತಮ್ಮ ಮಾಜಿ ಪತ್ನಿ ರಿಯಾ ಪಿಳ್ಳೈ ಜತೆ ಶರ್ಮಾ ಸಂಬಂಧ ಹೊಂದಿರುವ ಬಗ್ಗೆ ಕೆಲ ದಾಖಲೆಗಳನ್ನು ನಾನು ಆ ಮೊದಲು ನ್ಯಾಯಾಲಯಕ್ಕೆ ನೀಡಿದ್ದೆ.
ಈ ಹಿನ್ನೆಲೆಯಲ್ಲಿ ಕೋಪಗೊಂಡಿರುವ ಶರ್ಮಾ ನನಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರಿಗೆ ಪೇಸ್ ತಿಳಿಸಿದ್ದಾರೆ.
ಅಲ್ಲದೆ, ಜುಲೈನಲ್ಲಿ ಪತ್ನಿಯೊಂದಿಗಿನ ಪ್ರಕರಣದ ಕುರಿತ ವಿಚಾರಣೆಯಲ್ಲಿ ಕೌಟುಂಬಿಕ ಕಲಹ, ಪೀಡನೆ ನಡೆಸಿರುವ ಬಗ್ಗೆ ಪೇಸ್ ನಿರಾಕರಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement