ಬಾಕ್ಸಿಂಗ್ ದಂತಕತೆ ಮೊಹ್ಮದ್ ಅಲಿ ಸ್ಥಿತಿ ಚಿಂತಾಜನಕ
ಕಳೆದ 25 ವರ್ಷಗಳಿಂದ ಅದುರುವಾಯು...
ಕಳೆದ 25 ವರ್ಷಗಳಿಂದ ಅದುರುವಾಯು ರೋಗದಿಂದ ಬಳಲುತ್ತಿರುವ ಅಮೆರಿಕದ ಬಾಕ್ಸಿಂಗ್ ದಂತಕತೆ ಮೊಹ್ಮದ್ ಅಲಿ ಸ್ಥಿತಿ ಚಿಂತಾಜನಕವಾಗಿದೆ.
71 ವರ್ಷದ ಮೊಹ್ಮದ್ ಅಲಿ ಜೀವನದ ಕೊನೆಯ ಕ್ಷಣಗಳನ್ನು ಕಳೆಯುತ್ತಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಆರೋಗ್ಯ ಚಿಂತಾಜನಕ ಸ್ಥಿತಿಗೆ ತಲುಪಿರುವ ಅಲಿ, ತಮ್ಮ ಬಗ್ಗೆ ಹಾಲಿವುಡ್ ನಿರ್ಮಿಸಿರುವ 'ಐ ಆ್ಯಮ್ ಅಲಿ' ಚಲನಚಿತ್ರ ಕಳೆದ ವಾರ ಬಿಡುಗಡೆಯಾದ ಸಮಾರಂಭಕ್ಕೂ ತೆರಳಿಲ್ಲ. ಕಾಕತಾಳೀಯವೆಂಬಂತೆ, ಅಲಿ ಬಲಿಷ್ಠ ಎದುರಾಳಿಗಳಾಗಿದ್ದ ಇಂಗ್ಲೆಂಡ್ನ ಜಾಯ್ ಬಗ್ನರ್ (64) ಮತ್ತು ಲಿಯೋನ್ ಸ್ಟಿಂಕ್ಸ್ (61) ಕ್ರಮವಾಗಿ ಗಂಭೀರವಾದ ಹೃದಯ ರೋಗ ಮತ್ತು ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ.
ಸ್ಟಿಂಕ್ಸ್ ಇತ್ತೀಚೆಗಷ್ಟೇ ಹಲವಾರು ಶಸ್ತ್ರ ಚಿಕಿತ್ಸೆಗೊಳಗಾಗಿದ್ದಾರೆ. ಹೆಚ್ಚು ಕಡಿಮೆ ಅಲಿ ಎದುರಾಳಿಗಳು ತುಂಬಾ ಘೋರವಾದ ಸಾವನ್ನು ಕಂಡಿದ್ದಾರೆ. ಅಲಿ ಎದುರಾಳಿಗಳಲೊಬ್ಬರಾದ ಸಿನ್ನಿ ಲಿಸಾನ್ ಮಿತಿ ಮೀರಿದ ಡ್ರಗ್ಸ್ ಸೇವಿಸಿ ಮೃತಪಟ್ಟಿದ್ದರು. ಅಜೆಂಟೀನಾದ ಬೊನಾವೆನಾ ಅವರನ್ನು ಶೂಟ್ ಮಾಡಲಾಗಿತ್ತು.