ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ತೀರತ್, ಶ್ಯಾಮಿಲಿಗೆ ಗರಿ

ತೀರತ್ ಕುಮಾರ್ ಮತ್ತು ಶ್ಯಾಮಿಲಿ ಸಿಂಗ್ ಅವರು ಭಾನುವಾರ ಉದ್ಯಾನ ನಗರದಲ್ಲಿ ನಡೆದ ಬೆಂಗಳೂರು...

Rashmi Kasaragodu
Updated On : 20 Oct 2014, 2:05 am

ಬೆಂಗಳೂರು: ತೀರತ್ ಕುಮಾರ್ ಮತ್ತು ಶ್ಯಾಮಿಲಿ ಸಿಂಗ್ ಅವರು ಭಾನುವಾರ ಉದ್ಯಾನ ನಗರದಲ್ಲಿ ನಡೆದ ಬೆಂಗಳೂರು ಮ್ಯಾರಥಾನ್‌ನ ಎಲೈಟ್ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.

2 ಗಂಟೆ 25 ನಿಮಿಷ. 51 ಸೆಕೆಂಡ್‌ಗಳಲ್ಲಿ ಗುರಿ ಸೇರಿದ ತೀರತ್ ಕುಮಾರ್ ಪುರುಷರ ವಿಭಾಗದಲ್ಲಿ ಅಗ್ರಸ್ಥಾನ ಪಡೆದರೆಸ 2:26:07 ಅವಧಿಯಲ್ಲಿ ಗುರಿ ಸೇರಿದ ಕೃಷ್ಣ ಸಿಂಗ್ ದ್ವಿತೀಯ ಸ್ಥಾನ ಹಾಗೂ 2: 27:04 ಅವಧಿಯಲ್ಲಿ ಗುರಿ ತಲುಪಿದ ನೀರಜ್ ಪಾಲ್ ಸಿಂಗ್ 3ನೇ ಸ್ಥಾನ ತಮ್ಮದಾಗಿಸಿಕೊಂಡರು. ತೀರತ್ ಕುಮಾರ್ ರು. 2 ಲಕ್ಷ ಬಹುಮಾನ ತಮ್ಮದಾಗಿಸಿಕೊಂಡರು.

ಇನ್ನು ಮಹಿಳೆಯರ ಎಲೈಟ್ ವಿಭಾಗದಲ್ಲಿ 3:16:18 ಅವಧಿಯಲ್ಲಿ ಗುರಿ ಸೇರಿದ ಶ್ಯಾಮಿಲಿ ಅಗ್ರಸ್ಥಾನ ಗಿಟ್ಟಿಸಿದರು. 3:17:20 ಅವಧಿಯಲ್ಲಿ ಗುರಿ ತಲುಪಿದ ಸುಧಾ ವಿಗ್ ದ್ವಿತೀಯ ಸ್ಥಾನ ಹಾಗೂ 3:29:09 ಅವಧಿಯಲ್ಲಿ ಗುರಿ ಸೇರಿದ ಜ್ಯೋತಿ ಶಂಕರ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಪುರುಷರ ಹಾಫ್ ಮ್ಯಾರಥಾನ್ ವಿಭಾಗದಲ್ಲಿ 1:11:57 ಅವಧಿಯಲ್ಲಿ ಗುರಿ ಸೇರಿದ ದಸರಿ ವಾಸು ಅಗ್ರಸ್ಥಾನ ಪಡೆದರೆ (1:12:10) ಮತ್ತು ಬಿ ಸಿ ತಿಲಕ್ (1:12:18) ಕ್ರಮವಾಗಿ 2ನೇ ಮತ್ತು 3 ನೇಸ್ಥಾನ  ತಮ್ಮದಾಗಿಸಿಕೊಂಡರು.

ಮಹಿಳೆಯರ ಹಾಫ್ ಮ್ಯಾರಥಾನ್ ವಿಭಾಗದಲ್ಲಿ 1:18:23 ಅವಧಿಯಲ್ಲಿ ಗುರಿ ಸೇರಿದ ಸುಧಾ ಸಿಂಗ್ ಮೊದಲ ಸ್ಥಾನ ಪಡೆದರೆ, ಎಲ್. ಸೂರ್ಯ (1:19:12) ಮತ್ತು ಕವಿತಾರೌತ್ (1:20:26) ಕ್ರಮವಾಗಿ 2ನೇ ಮತ್ತು 3ನೇ ಸ್ಥಾನ ತಮ್ಮದಾಗಿಸಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement