ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಗೆದ್ದ ತಂಡಕ್ಕೆ ಬೆಂಗಳೂರು ಬುಲ್ಸ್ ಸನ್ಮಾನ
ಬೆಂಗಳೂರು: ಇತ್ತೀಚೆಗೆ "ಇಂಚೆಯಾನ್ನಲ್ಲಿ ಜರುಗಿದ ಏಷ್ಯನ್ ಗೇಮ್ಸ್ 2014"ರ ಕಬ್ಬಡ್ಡಿ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಪುರುಷ ಮತ್ತು ಮಹಿಳೆಯರ ತಂಡದ ಏಳು ಮಂದಿ ಕಬಡ್ಡಿ ಆಟಗಾರರನ್ನು, ಪ್ರೊ ಕಬ್ಬಡ್ಡಿ ತಂಡವಾದ "ಬೆಂಗಳೂರು ಬುಲ್ಸ್" ನಗರದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಿತು. ಕಬಡ್ಡಿ ಆಟಗಾರರು ಏಷ್ಯನ್ ಗೇಮ್ಸ್ನಲ್ಲಿ ಅದ್ಭುತ ಸಾಧನೆ ತೋರಿ ಚಿನ್ನದ ಪದಕ ಗೆದ್ದಿದ್ದಕ್ಕೆ ಅಭಿನಂದಿಸಿತು.
ಬೆಂಗಳೂರು ಬುಲ್ಸ್ ತಂಡದವರೇ ಆದ ಮಂಜಿತ್ ಚಿಲ್ಲರ್, ಅಜಯ್ ಠಾಕೂರ್ ಮತ್ತು ಗುರುಪ್ರೀತ್ ಸಿಂಗ್ ಮೂವರೂ ಸಹ ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಗೆದ್ದ ಕಬಡ್ಡಿ ತಂಡದಲ್ಲಿದ್ದರು. ಸನ್ಮಾನ ಸ್ವೀಕರಿಸಿದ ಉಳಿದ ನಾಲ್ಕು ಮಂದಿ ಕಬಡ್ಡಿ ಪ್ರತಿಭೆಗಳೆಂದರೆ ತೇಜಸ್ವಿನಿ, ಮಮತಾ, ಜಯಂತಿ, ಸುಷ್ಮಿತಾ ಪವಾರ್ ಅವರೂ ಕನರ್ಾಟಕ ಮೂಲದವರೇ ಆಗಿದ್ದಾರೆ ಎಂಬುದು ಗಮನಾರ್ಹ.
ಬೆಂಗಳೂರು ಬುಲ್ಸ್ ತಂಡದ ಮಾಲೀಕರಾದ ಉದಯ್ ಸಿನ್ಹಾ ವಾಲಾ ಮತ್ತು ಬೆಂಗಳೂರು ಬುಲ್ಸ್ ತಂಡದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಅಖಿಲ್ ರಾನಡೆ ಅವರು ಏಷ್ಯನ್ ಗೇಮ್ಸ್ ಕಬಡ್ಡಿಯಲ್ಲಿ ಚಿನ್ನದ ಪದಕ ಗೆದ್ದ ಎಲ್ಲಾ ಏಳು ಕ್ರೀಡಾಕಲಿಗಳಿಗೂ ವಿಶೇಷ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದರು.