ಪಂದ್ಯಕ್ಕೂ ಮುನ್ನ 'ಅದಿಲ್ಲ'ವೆಂದ ಬಾಲೋಟೆಲ್ಲಿ!
ಕ್ರೀಡಾ ಪಂದ್ಯಕ್ಕೂ ಮುನ್ನ ಆಟಗಾರರು..
ಕ್ರೀಡಾ ಪಂದ್ಯಕ್ಕೂ ಮುನ್ನ ಆಟಗಾರರು ಲೈಂಗಿಕ ಕ್ರಿಕೆಯಲ್ಲಿ ತೊಡಗಬೇಕು ಎಂಬುದು ಹಲವರ ವಾದ. ಇನ್ನು ಕೆಲವರಿಗದು ಸರಿಯಲ್ಲ ಎಂಬ ತರ್ಕ. ಕ್ರಿಕೆಟ್ಗಿಂತ ಫುಟ್ಬಾಲ್ ಜಗತ್ತಿನಲ್ಲಿ ಇದು ಹೆಚ್ಚು ಚರ್ಚೆಗೊಳಗಾದ ವಿಷಯ.
ಇಟಲಿಯ ಖ್ಯಾತ ಫುಟ್ಬಾಲ್ ತಾರೆ ಮಾರಿಯೋ ಬಾಲೋಟೆಲ್ಲಿ ಇದೇ ಚರ್ಚೆಗೆ ಪ್ರಸ್ತುತರಾಗುತ್ತಾರೆ. ಲಿವರ್ಪೂಲ್ ಕ್ಲಬ್ ಪ್ರತಿನಿಧಿಸಿರುವ ಬಾಲೋಟೆಲ್ಲಿ ಫುಟ್ಬಾಲ್ ಮೈದಾನದಲ್ಲಿ ಗೋಲ್ ಗಳಿಸಿ ಹೆಸರು ಮಾಡುವುದಕ್ಕಿಂತ ಇತರ ಚಟುವಟಿಕೆಗಳಿಂದ ಹೆಚ್ಚು ಪ್ರಚಾರ ಗಿಟ್ಟಿಸುತ್ತಾರೆ. ಒಳ್ಳೆ ವಿಚಾರಗಳಿಗಿಂತ ಕೆಟ್ಟ ವಿಚಾರಗಳಿಗೆ ಮಾಧ್ಯಮದಲ್ಲಿ ನಾನು ಚರ್ಚೆಗೊಳಗಾಗುತ್ತೇನೆ ಎಂಬುದನ್ನು ಬಾಲೋಟೆಲ್ಲಿ ಒಪ್ಪಿಕೊಳ್ಳುತ್ತಾರೆ.
ಇಂಗ್ಲೆಂಡ್ನಲ್ಲಿ ಪಂದ್ಯಕ್ಕೂ ಮುನ್ನ ಲೈಂಗಿಕ ಕ್ರಿಯೆ ನಡೆಸುವುದನ್ನು ಒಪ್ಪಿಕೊಳ್ಳಲಾಗುತ್ತದೆ. ಇದು ಸರಿಯಲ್ಲ. ಪಂದ್ಯ ನಡೆಯುವ ಮೂರು ಗಂಟೆ ಮುನ್ನ ನಾನು ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತೇನೆ ಎಂಬ ಸುದ್ದಿ ಆಗಿದೆ. ಇದೂ ಸುಳ್ಳು ಎಂದು ನುಣುಚಿಕೊಂಡರು ಬಾಲೋಟೆಲ್ಲಿ.