ಕೋಚ್ ಸ್ಥಾನಕ್ಕೆ ವಾಲ್ಶ್ ಗುಡ್ ಬೈ
ಭಾರತ ಹಾಕಿ ತಂಡ ಮುಖ್ಯ ಕೋಚ್ ಟೆರ್ರಿ ವಾಲ್ಶ್ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ...
ನವದೆಹಲಿ: ಭಾರತ ಹಾಕಿ ತಂಡ ಮುಖ್ಯ ಕೋಚ್ ಟೆರ್ರಿ ವಾಲ್ಶ್ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಕಿ ಇಂಡಿಯಾ ಅಧ್ಯಕ್ಷ ಬಾತ್ರಾ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ವಾಲ್ಶ್ ಇಮೇಲ್ ಮೂಲಕ ಕಳುಹಿಸಿದ್ದಾರೆ. ವಾಲ್ಶ್ ಜತೆ ಗುತ್ತಿಗೆ ಒಪ್ಪಂದ ಮಾಡಿಕೊಂಡಿದ್ದ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ವಾಲ್ಕ್ಷ್ ರಾಜಿನಾಮೆ ನೀಡಿದ್ದಾರೆ.
ವಾಲ್ಕ್ಷ ಗರಡಿಯಲ್ಲಿ ಪಳಗಿದ್ದ ಭಾರತ ಹಾಕಿ ತಂಡ ಇತ್ತೀಚೆಗಷ್ಟೇ ದಕ್ಷಿಣ ಕೊರಿಯಾದ ಇಂಚಾನ್ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಏಷ್ಯನ್ ಗೇಮ್ಸ್ಗೆ ಅರ್ಹತೆ ಪಡೆದುಕೊಂಡಿತ್ತು. ಆದರೆ, ಇನ್ನೇನು ನಡೆಯಲಿರುವ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಸಮೀಪಿಸುತ್ತಿರುವಂತೆಯೇ ವಾಲ್ಶ್ ರಾಜಿನಾಮೆ ನೀಡಿರುವುದು ಹಾಕಿ ಅಭಿಮಾನಿಗಳಲ್ಲಿ ಅಚ್ಚರಿಯನ್ನುಂಟು ಮಾಡಿದೆ.
ಭಾರತೀಯ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಂಭಾವನೆ. ವಿವಾದ ಹೊಂದಿದ್ದೇ ವಾಲ್ಶ್ ರಾಜಿನಾಮೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಆದರೆ ಹಾಕಿ ಇಂಡಿಯಾ ಕಾರ್ಯ ನಿರ್ವಹಣೆ ಬಗ್ಗೆ ಸಹ ವಾಲ್ಶ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.