ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸರಿತಾ ದೇವಿಗೆ ನಿಷೇಧ

ಏಷ್ಯನ್ ಕ್ರೀಡಾಕೂಟದಲ್ಲಿ ತಮ್ಮ ವಿರುದ್ಧ ತೀರ್ಪು ನೀಡಿದ್ದ ರೆಫರಿ ವಿರುದ್ಧ ಪ್ರತಿಭಟನೆ ನಡೆಸಿದ್ದ ಭಾರತದ ಮಹಿಳಾ ಬಾಕ್ಸರ್ ಸರಿತಾದೇವಿ...

Vishwanath S
Updated On : 24 Oct 2014, 8:46 am

ನವದೆಹಲಿ: ಏಷ್ಯನ್ ಕ್ರೀಡಾಕೂಟದಲ್ಲಿ ತಮ್ಮ ವಿರುದ್ಧ ತೀರ್ಪು ನೀಡಿದ್ದ ರೆಫರಿ ವಿರುದ್ಧ ಪ್ರತಿಭಟನೆ ನಡೆಸಿದ್ದ ಭಾರತದ ಮಹಿಳಾ ಬಾಕ್ಸರ್ ಸರಿತಾದೇವಿ ಮತ್ತು ಅವರ ಕೋಚ್ ಮೇಲೆ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ(ಎಐಬಿಎ) ನಿಷೇಧ ಹೇರಿದೆ. ರೆಫರಿ ಸಂಪೂರ್ಣವಾಗಿ ಏಕಪಕ್ಷೀಯ ತೀರ್ಪು ನೀಡಿದ್ದಾರೆ ಎಂದು ದೂರಿದ್ದ ಸರಿತಾ ಪದಕ ಸ್ವೀಕರಿಸಲು ನಿರಾಕರಿಸಿದ್ದರು.

ಸರಿತಾ ಅವರೊಂದಿಗೆ ಕೋಚ್ ಗುರುಬಕ್ಸ್ ಸಿಂಗ್ ಸಂದು ಮೇಲೆ ಸಹ ನಿಷೇಧ ಹೇರಿದ್ದು, ಮುಂದಿನ ಸೂಚನೆವರೆಗೆ ಯಾವುದೇ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸದಿರುವಂತೆ ಎಐಬಿಎ ತಿಳಿಸಿದೆ. ಹೀಗಾಗಿ, ಸರಿತಾ ಅವರೊಂದಿಗೆ ಕೋಚ್ ಹರಿಂದರ್ ಸಂದು ಅವರನ್ನು ಸಹ ಅಮಾನತುಗೊಳಿಸಿರುವ ಕ್ರಮವನ್ನು ಖಂಡಿಸಿ ಎಐಬಿಎಗೆ ಪತ್ರ ಬರೆಯಲು ಭಾರತೀಯ ಅಧಿಕಾರಿಗಳು ತೀರ್ಮಾನಿಸಿದ್ದಾರೆ.

60ಕೆಜಿ ಲೈಟ್‌ವೇಟ್ ವಿಭಾಗದಲ್ಲಿ ಅತಿಥೇಯ ದಕ್ಷಿಣ ಕೊರಿಯಾದ ಬಾಕ್ಸರ್ ಪಾರ್ಕ್‌ಜಿನಾ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಸರಿತಾ ಮೇಲುಗೈ ಸಾಧಿಸಿದ್ದರು. ಆದರೆ, ಸ್ಪರ್ಧೆಯ ನಿಗಾ ವಹಿಸಿದ್ದ ರೆಫರಿ ಫಲಿತಾಂಶ ಅತಿಥೇಯ ಬಾಕ್ಸರ್ ಪರವಾಗಿ ನೀಡಿದ್ದರು. ಇದರಿಂದ ತೀವ್ರ ಬೇಸರಗೊಂಡಿದ್ದ ಸರಿತಾ ಕಂಚಿನ ಪದಕ ಸ್ವೀಕರಿಸಲು ನಿರಾಕರಿಸುವುದರೊಂದಿಗೆ, ರೆಫರಿ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಆದರೆ, ಅನಂತರ ಘಟನೆಯ ಬಗ್ಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದ ಸರಿತಾ, ಪದಕ ಸ್ವೀಕರಿಸುವುದರೊಂದಿಗೆ ತವರಿಗೆ ಮರಳಿದ್ದರು. ಆದರೆ, ಈಗ ಎಐಬಿಎ ಘಟನೆಯನ್ನು ಪರಿಗಣಿಸಿ ಸರಿತಾ ಮೇಲೆ ನಿಷೇಧ ಹೇರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement