ಬಿಗ್ ಬಿ ಜತೆ ಚೆನ್ನೈಯಿನ್ಗೆ ರಜನಿ ಚಿಯರ್ಸ್
ಅಮಿತಾಭ್ ಬಚ್ಚನ್ ಅವರೊಂದಿಗೆ ಸೇರಿದ...
ಮುಂಬೈ: ಅಮಿತಾಭ್ ಬಚ್ಚನ್ ಅವರೊಂದಿಗೆ ಸೇರಿದ ತಮಿಳು ಚಿತ್ರನಟ ಸೂಪರ್ ಸ್ಟಾರ್ ರಜನಿಕಾಂತ್ ಇಂಡಿಯನ್ ಸೂಪರ್ ಲೀಗ್ನಲ್ಲಿ ಚೆನ್ನೈಯಿನ್ ತಂಡವನ್ನು ಬೆಂಬಲಿಸಿದ್ದಾರೆ. ತಮ್ಮ ಪುತ್ರನ ಮಾಲೀಕತ್ವದ ತಂಡವನ್ನು ಬೆಂಬಲಿಸಿದ ರಜನಿಕಾಂತ್ಗೆ ಅಮಿತಾಬ್ ಬಚ್ಚನ್ ಅಭಿನಂದನೆ ಸಲ್ಲಿಸಿದ್ದಾರೆ.
ಬಿಗ್ ಬಿ ಮತ್ತು ಅಮಿತಾಭ್ ಹಾಗೂ ರಜನಿಕಾಂತ್ ಸೇರಿ ವೀಕ್ಷಿಸಿದ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈಯಿನ್ ತಂಡ ಕೆರಳ ಬ್ಲಾಸ್ಟರ್ಸ್ ಎಫ್. ಸಿ ತಂಡದ ವಿರುದ್ಧ ಜಯ ಸಾಧಿಸಿತ್ತು.
ನಾವು ಜಯ ಸಾಧಿಸಿದೆವು. ಚೆನ್ನೈಗೆ ಅಭಿನಂದನೆ, ಪಂದ್ಯಕ್ಕೆ ಆಗಮಿಸಿ ನಮ್ಮ ತಂಡವನ್ನು ಬೆಂಬಲಿಸಿದ ರಜನಿಕಾಂತ್ ಅವರಿಗೂ ಅಭಿನಂದನೆ ಎಂದು ಅಮಿತಾಭ್ ಟ್ವೀಟ್ ಮಾಡಿದ್ದಾರೆ.