ವಿಶ್ವ ಬಿಲಿಯರ್ಡ್ಸ್‌ಗೆ ಪಂಕಜ್ ಕಿಂಗ್
ತನ್ನ ಯಶಸ್ಸಿನ ನಾಗಾಲೋಟದಲ್ಲಿ ಮುಂದುವರಿದಿರುವ ಕರ್ನಾಟಕದ ಕುವರ ಪಂಕಜ್ ಅಡ್ವಾಣಿ...
ಲೀಡ್ಸ್: ತನ್ನ ಯಶಸ್ಸಿನ ನಾಗಾಲೋಟದಲ್ಲಿ ಮುಂದುವರಿದಿರುವ ಕರ್ನಾಟಕದ ಕುವರ ಪಂಕಜ್ ಅಡ್ವಾಣಿ, ಮತ್ತೊಂದು ಗರಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಶುಕ್ರವಾರ ಇಂಗ್ಲೆಂಡ್‌ನ ಲೀಡ್ಸ್‌ನಲ್ಲಿ ನಡೆದ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್‌ನ(150ಕ್ಕೂ ಹೆಚ್ಚು ಅಂಕ ಮಾದರಿಯ) ಫೈನಲ್ ಪಂದ್ಯದಲ್ಲಿ ಪಂಕಜ್, ಮಾಜಿ ಚಾಂಪಿಯನ್ ಸಿಂಗಾಪುರದ ಪೀಟರ್ ಗಿಲ್ ಕ್ರಿಸ್ಟ್ ವಿರುದ್ಧ 6-2 ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ. ಈ ಮೂಲಕ 11ನೇ ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಲೀಗ್ ಹಂತದಲ್ಲಿ ಗಿಲ್‌ಕ್ರಿಸ್ಟ್ ವಿರುದ್ಧ 3-2 ಅಂತರದಲ್ಲಿ ಸೋಲನುಭವಿಸಿದ್ದ ಪಂಕಜ್ ಅಡ್ವಾಣಿ, ಪ್ರಶಸ್ತಿ ಸಂಪೂರ್ಣ ಪ್ರಾಬಲ್ಯ ಮೆರೆದರು.
ಗಿಲ್‌ಕ್ರಿಸ್ಟ್ ಮೊದಲ ಫ್ರೇಮ್‌ನಲ್ಲಿ 145 ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಆರಂಭ ಪಡೆದರು. ಎರಡನೇ ಫ್ರೇಮ್‌ನಲ್ಲಿ 127 ಅಂಕಗಳೊಂದಿಗೆ ಅಡ್ವಾಣಿ, ಹೋರಾಟ ನಡೆಸಿದರು. ಮೂರನೇ ಫ್ರೇಮ್‌ನಲ್ಲಿ ಮತ್ತೆ ನಿಯಂತ್ರಣ ಸಾಧಿಸಿದ ಗಿಲ್‌ಕ್ರಿಸ್ಟ್ ಪಂದ್ಯದಲ್ಲಿ 2-1 ಮುನ್ನಡೆ ಪಡೆದುಕೊಂಡರು.
ನಂತರ ತನ್ನ ಆಕ್ರಮಣಕಾರಿ ಪ್ರದರ್ಶನ ನೀಡಿದ ಪಂಕಜ್ ಅಡ್ವಾಣಿ, ಉಳಿದ ಎಲ್ಲಾ ಫ್ರೇಮ್‌ಗಳಲ್ಲಿ ಪ್ರಭುತ್ವ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಈ ಮೂಲಕ ಪಂಕಜ್ ಪ್ರಸಕ್ತ ಸಾಲಿನಲ್ಲಿ 3ನೇ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಗಿಲ್‌ಕ್ರಿಸ್ಟ್ ಪಂದ್ಯಾವಳಿಯಲ್ಲಿ ಅಪಾಯಕಾರಿ ಎದುರಾಳಿಯಾಗಿದ್ದು, ಫೈನಲ್‌ನಲ್ಲಿನ ಪ್ರದರ್ಶನ ತೃಪ್ತಿ ತಂದಿದೆ. ಈ ಮೂಲಕ ಕನಸು ನನಸಾಗಿದೆ ಎಂದು ಅಡ್ವಾಣಿ ಸಂತಸ ವ್ಯಕ್ತಪಡಿಸಿದರು.