ಬೆಟ್ಟಿಂಗ್ನಲ್ಲಿ ಮೇಯಪ್ಪನ್ ಫಿಕ್ಸ್
2013ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ-20 ಪಂದ್ಯಾವಳಿಯ ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ....
ನವದೆಹಲಿ: 2013ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ-20 ಪಂದ್ಯಾವಳಿಯ ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ಅಳಿಯ ಗುರುನಾಥ ಮೇಯಪ್ಪನ್ ಭಾಗಿಯಾಗಿರುವುದು ಖಚಿತವಾಗಿದೆ.
ಬೆಟ್ಟಿಂಗ್ ಕುರಿತು ಬಾಲಿವುಡ್ ತಾರೆ ವಿಂದೂ ದಾರಾ ಸಿಂಗ್ ಅವರ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ಮೇಯಪ್ಪನ್ ಎಂಬುದು ಧೃಢಪಟ್ಟಿದೆ. ಈ ಇಬ್ಬರ ನಡುವಿನ ದೂರವಾಣಿ ಸಂಭಾಷಣೆಯ ಧ್ವನಿ ಪರೀಕ್ಷೆ ನಡೆಸಿರುವ ಸೆಂಟ್ರಲ್ ಫೋರೆನ್ಸಿಕ್ ವಿಜ್ಞಾನ ಪ್ರಯೋಗಾಲಯದ ತಜ್ಞರು, ಇದರಲ್ಲಿ ದಾಖಲಾಗಿರುವುದು ಮೇಯಪ್ಪನ್ ಅವರದ್ದೇ ಧ್ವನಿ ಎಂದು ಖಚಿತಪಡಿಸಿದ್ದಾರೆ. ಈ ಮಧ್ಯೆ ಸುಪ್ರೀಂ ನೇಮಿಸಿರುವ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ನೇತೃತ್ವದ ತನಿಖಾ ಸಮಿತಿ ಈ ತಿಂಗಳಾಂತ್ಯದಲ್ಲಿ ಅಂತಿಮ ವರದಿ ಸಲ್ಲಿಸಲಿದೆ.