ಚಾಂಪಿಯನ್ಸ್ ಟೆನಿಸ್: ಬೆಂಗಳೂರು ರ್ಯಾಪ್ಟರ್ಸ್ಗೆ ವೀನಸ್ ವಿಲಿಯಮ್ಸ್
ಮುಂದಿನ ತಿಂಗಳು ಆರಂಭವಾಗಲಿರುವ ಚಾಂಪಿಯನ್ಸ್ ಟೆನಿಸ್ ಲೀಗ್ ಟೂರ್ನಿಯ ಬೆಂಗಳೂರು ಪ್ರಾಂಚೈಸಿ ....
ಬೆಂಗಳೂರು: ಮುಂದಿನ ತಿಂಗಳು ಆರಂಭವಾಗಲಿರುವ ಚಾಂಪಿಯನ್ಸ್ ಟೆನಿಸ್ ಲೀಗ್ ಟೂರ್ನಿಯ ಬೆಂಗಳೂರು ಪ್ರಾಂಚೈಸಿ ತಂಡವಾಗಿರುವ ಬೆಂಗಳೂರು ರ್ಯಾಪ್ಟರ್ಸ್ಗೆ ವಿನಸ್ ವಿಲಿಯಮ್ಸ್ ಐಕಾನ್ ಆಟಗಾರ್ತಿಯಾಗಿದ್ದಾರೆ.
ಮಂಗಳವಾರ ನಡೆದ ಸಮಾರಂಭದಲ್ಲಿ ಮಾಜಿ ಟೆನಿಸ್ ತಾರೆ ವಿಜಯ್ ಅಮೃತ್ರಾಜ್ ಹಾಗೂ ಫ್ರಾಂಚೈಸಿ ಮಾಲೀಕರಾದ ಮಿತು ಚಾಂಡಿಲ್ಯ ಹಾಗೂ ಇಂಗಾಸ ಚಾಂಡಿಲ್ಯ ತಂಡದ ಜರ್ಸಿ ಬಿಡುಗಡೆ ಮಾಡಲಾಗಿದ್ದು, ತಂಡವನ್ನು ಪ್ರಕಟಿಸಲಾಯಿತು.
ಬೆಂಗಳೂರು ರ್ಯಾಪ್ಟರ್ಸ್ ತಂಡದಲ್ಲಿ ವಿನಸ್ ವಿಲಿಯಮ್ಸ್ ಜತೆಗೆ ಫೆಲಿಸಿಯಾನೊ ಲೊಪೆಜ್, ಭಾರತದ ಯುವ ಆಟಗಾರ ರಾಮ್ಕುಮಾರ್ ರಾಮನಾಥನ್ ಮತ್ತು ಥಾಮಸ್ ಎನ್ಲಿಚ್ ಇದ್ದಾರೆ.
ಡ್ರಾನಲ್ಲಿ ಪ್ರತಿ ತಂಡ ಲೆಜೆಂಡ್ ಸಿಂಗಲ್ಸ್, ಮಿಶ್ರ ಡಬಲ್ಸ್ , ಮಹಿಳೆಯರ ಸಿಂಗಲ್ಸ್, ಪುರುಷರ ಡಬಲ್ಸ್ ಹಾಗೂ ಪುರುಷರ ಸಿಂಗಲ್ಸ್ ಪಂದ್ಯಗಳಿರುತ್ತದೆ. ಒಂದು ಪಂದ್ಯದಲ್ಲಿ 5 ಸೆಟ್ಗಳಿದ್ದು, ಮೊದಲು 6 ಅಂಕ ಪಡೆದ ಆಟಗಾರ ವಿಜೇತನಾಗುತ್ತಾನೆ. ಒಂದು ವೇಳೆ 5-5ರ ಸಮಬಲವಾದರೆ, 9 ಅಂಕಗಳ ಟ್ರೈಬ್ರೇಕರ್ ಇರುತ್ತದೆ. ಯಾವ ತಂಡ ಹೆಚ್ಚು ಗೇಮ್ ಗೆಲ್ಲುತ್ತದೋ ಆ ತಂಡ ಎದುರಾಳಿ ವಿರುದ್ಧ ಗೆಲವು ದಾಖಲಿಸಲಿದೆ. ಪಂದ್ಯಾವಳಿ 10 ದಿನಗಳ ಕಾಲ ನಡೆಯಲಿದ್ದು, ಒಟ್ಟು 6 ತಂಡಗಳು ಭಾಗವಹಿಸಲಿವೆ. ಮುಂದಿನ ತಿಂಗಳು 17ರಿಂದ ಆರಂಭವಾಗಲಿದೆ. ಪ್ರತಿ ತಂಡ ಎರಡು ತಂಡಗಳ ವಿರುದ್ಧ ಒಟ್ಟು ನಾಲ್ಕು ಪಂದ್ಯಗಳನ್ನಾಡಲಿದ್ದು, ಅಗ್ರ ತಂಡ ನ.26ರಂದು ನಡೆಯಲಿರುವ ಫೈನಲ್ನಲ್ಲಿ ಸೆಣೆಸಲಿವೆ