ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಗೆಳತಿಗೆ ಥಳಿತ: ವರದಿ ನಿರಾಕರಿಸಿದ ಪುಟ್ಬಾಲ್ ದಂತಕತೆ ಡೀಗೊ ಮರಡೋನಾ

ತನ್ನ ಗಳತಿ ರೋಸಿಯೋ ಓಲಿವಾಗೆ ಥಳಿಸಿರುವ ಕುರಿತು ವಿಡಿಯೋ ಬಿಡುಗಡೆಯಾಗಿದ್ದರೂ, ಅದನ್ನು ನಿರಾಕರಿಸಿರುವ....

Rashmi Kasaragodu
Updated On : 30 Oct 2014, 11:40 am

ಬ್ಯೂನಸ್ ಐರಿಸ್ : ತನ್ನ ಗಳತಿ ರೋಸಿಯೋ ಓಲಿವಾಗೆ ಥಳಿಸಿರುವ ಕುರಿತು ವಿಡಿಯೋ ಬಿಡುಗಡೆಯಾಗಿದ್ದರೂ, ಅದನ್ನು ನಿರಾಕರಿಸಿರುವ ಅರ್ಜೆಂಟೀನಾದ ಮಾಜಿ ಖ್ಯಾತ ಫುಟ್ಬಾಲ್ ಆಟಗಾರ ಡಿಗೋ ಮರಡೋನಾ, ಆಕೆಯ ವಿರುದ್ಧ ಕಳ್ಳತನದ ದೂರು ದಾಖಲಿಸಿದ್ದಾರೆ.

ಓಲಿವಾಗೆ ಥಳಿಸುತ್ತಿರುವ ದೃಶ್ಯವನ್ನು ಹೊಂದಿರುವ ವಿಡಿಯೋವನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆಯ ವಿಡಿಯೋ ಬಿಡುಗಡೆಯಾಗಿರುವ ಕುರಿತು ನಾನು ಡಿಗೋ ಮರಡೋನಾ ಜತೆ ಮಾತನಾಡಿದ್ದೇನೆ. ವಿಡಿಯೋ ಬಿಡುಗಡೆಯಾಗಿರುವುದಕ್ಕೆ ನಾನು ಜವಾಬ್ದಾರಳಲ್ಲ. ಮರಡೋನಾ ಅವರ ಸಂಬಂಧಿಯೇ ಇದಕ್ಕೆ ಪ್ರಮುಖ ಕಾರಣ . ಆದಾಗ್ಯೂ, ಅವರು ನನ್ನ ವಿರುದ್ಧವೇ ದೂರು ದಾಖಲಿಸಿದ್ದಾರೆ ' ಎಂದು ಓಲಿವಾ ಅರ್ಜೆಂಟೀನಾ ಟಿವಿಯೊಂದಕ್ಕೆ ತಿಳಿಸಿದ್ದಾರೆ. ಕೇವಲ 22 ವರ್ಷದ ಓಲಿವಾ  ಅವರು 53 ವರ್ಷದ ಮರಡೋನಾ ಅವರೊಂದಿಗೆ ಗೊಂದಲದ ಸಂಬಂಧ ಹೊಂದಿದ್ದಾರೆ. ಸದ್ಯಕ್ಕೆ ಮರಡೋನಾ ಕ್ರೀಡಾ  ಪ್ರಾಯೋಜಕತ್ವದ ಗುತ್ತಿಗೆ ಹೊಂದಿರುವ ಹಿನ್ನೆಲೆಯಲ್ಲು ದುಬೈನಲ್ಲಿ ನೆಲೆಸಿದ್ದಾರೆ.
ಓಲಿವಾಗೆ ಹೊಡೆದಿರುವ ವಿಡಿಯೋ ತುಣುಕೊಂದನ್ನು ಅರ್ಜೆಂಟೀನಾ ಟಿವಿ ಚಾನೆಲ್‌ಗಳು ಪ್ರಸಾರ ಮಾಡಿವೆ. ಅದರಲ್ಲಿ ಮರಡೋನಾ ಓಲಿವಾ ಮೇಲೆ ಹಲ್ಲೆಗೆ ಮುಂದಾದಾಗ ಆಕೆ 'ನಿಲ್ಲಿಸಿ ನಿಲ್ಲಿಸಿ' ಎಂದು ತಮ್ಮ ಮೇಲಿನ  ಹಲ್ಲೆಯನ್ನು ತಡೆಯಲು ಯತ್ನಿಸಿದ್ದಾಳೆ. ಆದರೆ ಮರಡೋನಾ ಹೇಳಿರುವುದೇ ಬೇರೆ, ನಾನು ಆಕೆಯ  ಮೇಲೆ ಹಲ್ಲೆ ಮಾಡಿಲ್ಲ. ಬದಲಾಗಿ ಆಕೆಯ ಕೈಯಲ್ಲಿದ್ದ ಫೋನ್‌ನ್ನು ಕೆಳಗೆ ಕೆಡವಿದ್ದಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement