ದ. ಆಫ್ರಿಕಾ ಪ್ರವಾಸಕ್ಕೆ ಅರ್ಜುನ್ ತೆಂಡೂಲ್ಕರ್
ವೊರ್ಲಿ ಕ್ರಿಕೆಟ್ ಕ್ಲಬ್ 16 ರಿಂದ 18 ವರ್ಷದೊಳಗಿನ ಕ್ರಿಕೆಟ್ ತಂಡದ ನಾಯಕತ್ವ ವಹಿಸಲಿರುವ ಕ್ರಿಕೆಟ್ ದಿಗ್ಗಜ....
ಮುಂಬೈ: ವೊರ್ಲಿ ಕ್ರಿಕೆಟ್ ಕ್ಲಬ್ 16 ರಿಂದ 18 ವರ್ಷದೊಳಗಿನ ಕ್ರಿಕೆಟ್ ತಂಡದ ನಾಯಕತ್ವ ವಹಿಸಲಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್, ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ವೊರ್ಲಿ ಕ್ರಿಕೆಟ್ ಕ್ಲಬ್ನ ಮಾಲೀಕರಾದ ಅವಿನಾಶ್ ಕದಮ್ ಈ ಸರಣಿಯನ್ನು ಆಯೋಜಿಸಿದ್ದು, ನವೆಂಬರ್ 2 ರಿಂದ 15ರ ವರೆಗೆ ತಂಡ ಪ್ರಯಾಣ ಬೆಳೆಸಲಿದ್ದು, ಕಳೆದ ವರ್ಷವೂ ಆಫ್ರಿಕಾ ಪ್ರವಾಸ ಬೆಳೆಸಿದ್ದ ಅರ್ಜುನ್ ತಂಡದ ಸಾರಥ್ಯವನ್ನು ವಹಿಸಲಿದ್ದಾರೆ. ಅರ್ಜುನ್ ಸಹ ತನ್ನ ತಂದೆಯಂತೆ ಉತ್ತಮ ಕಲಿಕಗಾರನಾಗಿದ್ದು, ಕಳೆದ ವರ್ಷದಿಂದ ಸಾಕಷ್ಟು ಪಕ್ವತೆ ಪಡೆದಿದ್ದಾನೆ ಎಂದು ತಿಳಿಸಿದರು.
ಈ ವಿದೇಶಿ ಪ್ರವಾಸದಿಂದ ಚಿಕ್ಕ ವಯಸ್ಸಿನಲ್ಲೇ ಕಿರಿಯ ಆಟಗಾರರು ವಿದೇಶದ ವೇಗದ ಪಿಚ್ನಲ್ಲಿ ಆಡುವ ಅನುಭವ ಪಡೆಯಲಿದ್ದಾರೆ ಎಂದರು.